ಈ ವರ್ಷ ಟೆಲಿಕಾಂ ಕ್ಷೇತ್ರದಲ್ಲಿ ಸುಮಾರು 20 ಲಕ್ಷ ಮಂದಿಗೆ ಉದ್ಯೋಗಾವಕಾಶಗಳು ಲಭ್ಯವಾಗಲಿವೆ ಎಂದು ಕನ್ಸಲ್ಟೆನ್ಸಿ ಸಂಸ್ಥೆ ಟೀಮ್‌ಲೀಜ್ ಸರ್ವೀಸಸ್ ತಿಳಿಸಿದೆ. ಇಂಟರ್‌ನೆಟ್ ಬಳಕೆ, ನಗದು ರಹಿತ ವಹಿವಾಟಿನ ಹೆಚ್ಚಳ, ಸರಕಾರಿ ನಿಯಮಗಳಿಂದ ಈ ಉದ್ಯೋಗವಕಾಶಗಳು ಸೃಷ್ಟಿಯಾಗಿವೆ.
ಟೆಲಿಕಾಂ ಕ್ಷೇತ್ರ ವೃತ್ತಿಪರ ಮಂಡಳಿ (ಟಿಎಸ್‌ಎಸ್‍ಸಿ) ಜತೆಗೆ ಕೈಜೋಡಿಸಿ ಈ ಸಮೀಕ್ಷೆಯನ್ನು ಸಂಸ್ಥೆ ಬಿಡುಗಡೆ ಮಾಡಿದೆ. ಮೊಬೈಲ್ ತಯಾರಿ ಸಂಸ್ಥೆಗಳಿಗೆ 17.60 ಲಕ್ಷ ಮಂದಿ, ಟೆಲಿಕಾಂ ಆಪರೇಟರ್‌ಗಳಿಗೆ 3.70 ಲಕ್ಷ ಉದ್ಯೋಗವಕಾಶಗಳಿವೆ.
5ಜಿ ತಂತ್ರಜ್ಞಾನ ತರಲು ಮೂಲ ಸೌಕರ್ಯಗಳನ್ನು ಇನ್ನಷ್ಟು ಹೆಚ್ಚಿಸಬೇಕೆಂದು, ಆ ಮೂಲಕ ಅತಿಹೆಚ್ಚು ಸಂಖ್ಯೆಯಲ್ಲಿ ಉದ್ಯೋಗಗಳು ಸಿಗಲಿವೆ ಎಂದು ಸಮೀಕ್ಷೆ ತಿಳಿಸಿದೆ. ಈ ಕ್ಷೇತ್ರದಲ್ಲಿ 2020-21ರ ವೇಳೆಗೆ 9.20 ಲಕ್ಷ ಉದ್ಯೋಗಗಳು ಸಿಗಲಿವೆ. 2021ರ ವೇಳೆಗೆ ಟೆಲಿಕಾಂ ಕ್ಷೇತ್ರದಲ್ಲಿ 87 ಲಕ್ಷ ಮಂದಿಗೂ ಅಧಿಕ ಕಾರ್ಮಿಕರು ಬೇಕಾಗುತ್ತಾರೆ ಎಂದಿದೆ ಸಮೀಕ್ಷೆ.
ಕೈಗೆಟುಕು ಬೆಲೆಯಲ್ಲಿ ಡಾಟಾ, ಸ್ಮಾರ್ಟ್‍ಫೋನ್‌ಗಳು ಲಭ್ಯತೆ, ನೆಟ್‌ವರ್ಕ್ ಸುಧಾರಣೆಗೆ ಟೆಲಿಕಾಂ ಕಂಪೆನಿಗಳು ಅಧಿಕ ಬಂಡವಾಳ ಹೂಡುತ್ತಿರುವುದು, ಮೊಬೈಲ್ ಬ್ಯಾಂಕಿಂಗ್ ಮತ್ತು ವಾಲೆಟ್‌ಗಳ ಬಳಕೆ ಹೆಚ್ಚಾಗುತ್ತಿರುವುದು ಉದ್ಯೋಗವಕಾಶಗಳು ಹೆಚ್ಚಲು ಕಾರಣವಾದ ಅಂಶಗಳು.
ಇವರಿಗೆ ಹೆಚ್ಚು ಅವಕಾಶಗಳಿವೆ:
* ನೆಟ್‌ವರ್ಕ್ ಇಂಜಿನಿಯರ್
* ಸೈಬರ್ ಭದ್ರತಾ ನಿಪುಣರು
* ಅಪ್ಲಿಕೇಷನ್ ಡೆವಲಪರ್
* ಸೇವಾ ನೈಪುಣ್ಯತೆಯುಳ್ಳವರು
* ಸಿಸ್ಟಂ ಇಂಜಿನಿಯರ್
* ಸೇಲ್ಸ್ ಎಗ್ಜಿಕ್ಯೂಟೀವ್
* ಮೊಬೈಲ್ ತಯಾರಿ ತಂತ್ರಜ್ಞರು
* ಕಾಲ್ ಸೆಂಟರ್ ಎಗ್ಜಿಕ್ಯೂಟೀವ್ಸ್
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.