Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

11 ವರ್ಷದ ಬಾಲಕನಿಂದ ಬ್ಯಾಂಕ್ ದರೋಡೆ!

11 ವರ್ಷದ ಬಾಲಕನಿಂದ ಬ್ಯಾಂಕ್ ದರೋಡೆ!
ಹರ್ಯಾಣ , ಗುರುವಾರ, 1 ಅಕ್ಟೋಬರ್ 2020 (10:32 IST)
ಹರ್ಯಾಣ: 11 ವರ್ಷದ ಬಾಲಕ ಬ್ಯಾಂಕ್ ನಿಂದ ಸುಮಾರು 20 ಲಕ್ಷ ರೂ. ದೋಚಿ ಯಾರಿಗೂ ಗೊತ್ತಾಗದಂತೆ ಪರಾರಿಯಾದ ಘಟನೆ ಹರ್ಯಾಣದ ಜಿಂದ್ ನಲ್ಲಿ ನಡೆದಿದೆ.


ಇಲ್ಲಿನ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಈ ಘಟನೆ ನಡೆದಿದೆ. ಬ್ಯಾಂಕ್ ನಲ್ಲಿ ಜನಜಂಗುಳಿಯಿದ್ದಾಗ ಇನ್ನೊಬ್ಬ ಆರೋಪಿಯೊಂದಿಗೆ ಬಂದಿದ್ದ ಈತ ಯಾರಿಗೂ ಗೊತ್ತಾಗದಂತೆ ಕ್ಯಾಶಿಯರ್ ಕ್ಯಾಬಿನ್ ಗೆ ನುಗ್ಗಿ ತಲಾ 5 ಲಕ್ಷ ರೂ.ಗಳ ನೋಟುಗಳ ಬಂಡಲ್ ಬ್ಯಾಗ್ ಗೆ ತುಂಬಿ ಸದ್ದಿಲ್ಲದೇ ಜಾಗ ಖಾಲಿ ಮಾಡಿದ್ದ. ಸಂಜೆ ವೇಳೆ ಬ್ಯಾಂಕ್ ಸಿಬ್ಬಂದಿ ನೋಟುಗಳ ಲೆಕ್ಕಾಚಾರ ಮಾಡುವಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಗಿದೆ. ಪೊಲೀಸರು ಸಿಸಿಟಿವಿ ಫೂಟೇಜ್ ಪರಿಶೀಲಿಸುವಾಗ 11 ವರ್ಷದ ಬಾಲಕ ಹಾಗೂ ಇನ್ನೊಬ್ಬ ವ್ಯಕ್ತಿ ಬ್ಯಾಗ್ ನೊಂದಿಗೆ ಪರಾರಿಯಾಗುತ್ತಿರುವುದು ಕಂಡುಬಂದಿದೆ. ಅರೆಕ್ಷಣ ಕ್ಯಾಶಿಯರ್ ತನ್ನ ಸೀಟ್ ನಿಂದ ಎದ್ದು ಅತ್ತ ಕಡೆ ಹೋಗುವಾಗ ಕ್ಯಾಬಿನ್ ಬಂದ್ ಮಾಡಲು ಮರೆತಿದ್ದ. ಈ ವೇಳೆ ಬಾಲಕ ಕೈ ಚಳಕ ತೋರಿದ್ದಾನೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡು, ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಲಾಕ್ ಡೌನ್ ಗೆ ಸಿದ್ಧತೆ