Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪೊಲೀಸ್ ಎಂದು ನಂಬಿಸಿ ದರೋಡೆ ಮಾಡಿದ ಖದೀಮ ಅರೆಸ್ಟ್

ಪೊಲೀಸ್ ಎಂದು ನಂಬಿಸಿ ದರೋಡೆ ಮಾಡಿದ ಖದೀಮ ಅರೆಸ್ಟ್
ಹಾಸನ , ಬುಧವಾರ, 30 ಸೆಪ್ಟಂಬರ್ 2020 (10:45 IST)
ಹಾಸನ: ತಾನು ಪೊಲೀಸ್ ಪೇದೆ ಎಂದು ಹಣ, ಚಿನ್ನಾಭರಣ ದೋಚಿದ ವ್ಯಕ್ತಿಯನ್ನು ಹೊಳೆನರಸೀಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ.


ಯುವಕನೊಬ್ಬ ಬೈಕ್ ಪಾರ್ಕ್ ಮಾಡುತ್ತಿದ್ದಾಗ ತಾನು ಪೊಲೀಸ್ ಎಂದು ಹೇಳಿಕೊಂಡು ಬಳಿಗೆ ಬಂದ ಆರೋಪಿ ಆತನನ್ನು ಪೊಲೀಸ್ ಠಾಣೆಗೆ ವಿಚಾರಣೆ ಮಾಡಬೇಕೆಂದು ಕರೆದೊಯ್ದಿದ್ದಾನೆ. ದಾರಿ ಮಧ‍್ಯೆ ಆತನಿಗೆ ಚಾಕು ತೋರಿಸಿ ಬೆದರಿಕೆ ಹಾಕಿದ ಆರೋಪಿ ಯುವಕನ ಬಳಿಯಿದ್ದ 16 ಸಾವಿರ ರೂ. ನಗದು ಮತ್ತು ಬೆಲೆ ಬಾಳುವ ಚಿನ್ನದ ಉಂಗುರವನ್ನು ದೋಚಿದ್ದಲ್ಲದೆ, ಆತನ ಮೋಟಾರ್ ಬೈಕ್ ಸಮೇತ ಪರಾರಿಯಾಗಿದ್ದಾನೆ. ಈ ಸಂಬಂಧ ಯುವಕ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಲಿಯನ್ ನಂತೆ ಕಾಣಲು ಇಂತಹ ದುಸ್ಸಾಹಸಕ್ಕೆ ಕೈ ಹಾಕಿದ