Bengaluru Gold Price: ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) ಇಂದು 48,010 ರೂ. ಗೆ ಆಗಿದೆ. ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನ ಇಂದು 44,010 ರೂ ಆಗಿದೆ.
Gold Rate on August 17 2021: ಬಂಗಾರದ ಮೇಲೆ ಹೂಡಿಕೆ ಮಾಡೋದು ಒಂದು ರೀತಿ ಭದ್ರತೆಯ ಪ್ರತೀಕ. ಇಂದು ಕೊಂಡ ಒಂದಿಷ್ಟೇ ಬಂಗಾರ ಕೆಲ ಸಮಯದ ನಂತರ ಭಾರೀ ಲಾಭ ತಂದುಕೊಡುತ್ತದೆ. ಬಹುಶಃ ಹಣದುಬ್ಬರದ ಪ್ರತೀ ಏರಿಳಿಕೆಯಲ್ಲೂ ಉತ್ತಮ ಬೆಲೆ ಕಾಯ್ದಿರಿಸಿಕೊಂಡಿರುವ ಏಕೈಕ ವಸ್ತು ಚಿನ್ನವೇ. ಹಾಗಾಗಿ ಪ್ರತಿದಿನ ದಿನಕ್ಕೆರಡು ಬಾರಿ ಚಿನ್ನದ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಏರಿಳಿತವಾದರೂ ಜನರಿಗೆ ಅದರಲ್ಲಿ ಆಸಕ್ತಿ ಒಂಚೂರೂ ಕಡಿಮೆ ಆಗೋದೇ ಇಲ್ಲ. ಒಂದು ಕಡೆ ಹೂಡಿಕೆಯ ರೂಪದಲ್ಲಿ ಚಿನ್ನಕ್ಕೆ ಡಿಮ್ಯಾಂಡ್ ಇದ್ದರೆ, ಮತ್ತೊಂದೆಡೆ ಆಭರಣ ಕೊಳ್ಳಲು ಭಾರತೀಯರೂ ಸೇರಿದಂತೆ ನಾನಾ ದೇಶಗಳ ಜನರಿಗೆ ಹೆಚ್ಚಿನ ಆಸಕ್ತಿ ಇರುತ್ತದೆ. ಇವೆಲ್ಲವೂ ಸೇರಿ ಪ್ರತಿದಿನದ ಚಿನ್ನದ ಬೆಲೆಯ ಮೇಲೆ ಎಲ್ಲರಿಗೂ ಒಂದು ಕಣ್ಣು ಇದ್ದೇ ಇರುತ್ತದೆ.
ಸತತ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಕಳೆದ 3 ದಿನಗಳಿಂದ ಏರಿಕೆಯಾಗಿ, ಆಭರಣ ಪ್ರಿಯರಿಗೆ ಶಾಕ್ ಕೊಟ್ಟಿತ್ತು. ಕೆಲವು ದಿನ ಸ್ಥಿರತೆ ಕಾಯ್ದುಕೊಂಡಿದ್ದ ಬಂಗಾರದ ಬೆಲೆ, ಇನ್ನೂ ಕೆಲವು ದಿನ ಗಣನೀಯವಾಗಿ ಇಳಿಕೆ ಕಂಡಿತ್ತು. ಮತ್ತೆ ಕಳೆದ 3 ದಿನಗಳಿಂದ ಚಿನ್ನದ ದರ ಹೆಚ್ಚಾಗಿತ್ತು. ಆದರೆ ಇಂದು ಬಂಗಾರದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆ. ನಿನ್ನೆ 10 ಗ್ರಾಂ ಚಿನ್ನಕ್ಕೆ ನಿನ್ನೆ 10 ರೂಪಾಯಿ ಏರಿಕೆ ಕಂಡಿತ್ತು. ಇಂದು ಅದೇ ಚಿನ್ನಕ್ಕೆ 10 ರೂಪಾಯಿ ಇಳಿಕೆಯಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 45,98 ರೂ. ಇತ್ತು. ಇಂದು 45,970 ರೂ. ಆಗಿದೆ. ಅದೇ ರೀತಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಳಿಕೆ ಕಂಡಿದೆ. ನಿನ್ನೆ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 46,980 ರೂ. ಇತ್ತು. ಇಂದು 46,970 ರೂಪಾಯಿ ಆಗಿದೆ.