ಬೆಂಗಳೂರು, ಆ. 20: ವರಮಹಾಲಕ್ಷ್ಮೀ ಹಬ್ಬ ಇರುವ ಇಂದು ಚಿನ್ನ ಮತ್ತು ಬೆಳ್ಳಿ ಎರಡೂ ವಸ್ತುಗಳ ಬೆಲೆ ಇಳಿಕೆ ಕಂಡಿದೆ. ಆಭರಣ ಚಿನ್ನದ ದರ ಬೆಂಗಳೂರಿನಲ್ಲಿ 200 ರೂಪಾಯಿಯಷ್ಟು ತಗ್ಗಿದೆ. ಇದರೊಂದಿಗೆ 22 ಕೆರೆಟ್ನ 10 ಗ್ರಾಮ್ ಚಿನ್ನದ ಬೆಲೆ ಬೆಂಗಳೂರಿನಲ್ಲಿ 44,100 ರೂಗೆ ಬಂದು ನಿಂತಿದೆ. ಇನ್ನು, ಅಪರಂಜಿ ಚಿನ್ನ (24 ಕೆರಟ್) ಕೂಡ 10 ಗ್ರಾಮ್ಗೆ 230 ರೂಪಾಯಿಯಷ್ಟು ಬೆಲೆ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಅಪರಂಜಿ ಚಿನ್ನ 10 ಗ್ರಾಮ್ಗೆ 48,100 ರೂ ದರ ಹೊಂದಿದೆ.
ಇನ್ನೊಂದೆಡೆ ಬೆಳ್ಳಿ ಲೋಹದ ಬೆಲೆಯೂ ಇಳಿದಿದೆ. ಬೆಂಗಳೂರಿನಲ್ಲಿ 10 ಗ್ರಾಮ್ ಬೆಳ್ಳಿ ಬೆಲೆಯಲ್ಲಿ ಹತ್ತು ರೂಪಾಯಿಯಷ್ಟು ಇಳಿಕೆಯಾಗಿದೆ. ಇಲ್ಲಿ 1 ಗ್ರಾಮ್ ಬೆಳ್ಳಿ ಇದೀಗ 62.50 ರೂ ಇದೆ. 10 ಗ್ರಾಮ್ ಬೆಳ್ಳಿ 625 ರೂಪಾಯಿ ಬೆಲೆ ಹೊಂದಿದೆ. 100 ಗ್ರಾಮ್ ಬೆಳ್ಳಿಗೆ 6,250 ರೂ ಬೆಲೆ ಇದೆ.
ಅತ್ತ ಚಿನ್ನದ ಬೆಲೆ ಕಳೆದ ಕೆಲ ದಿನಗಳಿಂದ ಸತತವಾಗಿ ಏರಿಕೆ ಕಾಣುತ್ತಿದ್ದರೆ, ಇತ್ತ ಬೆಳ್ಳಿ ಬೆಲೆಯಲ್ಲಿ ಏರುಪೇರು ಆಗುವುದು ಹೆಚ್ಚಿದೆ. ಜುಲೈ 6ರಂದು 7,060 ರೂ ಇದ್ದ 100 ಗ್ರಾಮ್ ಬೆಳ್ಳಿ ಬೆಲೆ ಇದೀಗ 610 ರೂಪಾಯಿಯಷ್ಟು ಇಳಿಕೆ ಕಂಡಿರುವುದು ಗಮನಾರ್ಹ.
Petrol Diesel Rates Today - ಸತತ ಮೂರನೇ ದಿನ ಇಳಿಕೆಯಾದ ಡೀಸೆಲ್ ದರ
ಬೆಂಗಳೂರಿನಲ್ಲಿರುವ ಚಿನ್ನದ ದರ:
22 ಕೆರಟ್ ಆಭರಣ ಚಿನ್ನ:
1 ಗ್ರಾಮ್ಗೆ 4,430 ರೂ
10 ಗ್ರಾಮ್ಗೆ 44,300 ರೂ
22 ಕೆರಟ್ ಅಪರಂಜಿ ಚಿನ್ನ:
1 ಗ್ರಾಮ್ಗೆ 4,810 ರೂ
10 ಗ್ರಾಮ್ಗೆ 48,100 ರೂ
ಬೆಂಗಳೂರಿನಲ್ಲಿರುವ ಬೆಳ್ಳಿ ದರ:
1 ಗ್ರಾಮ್ ಬೆಳ್ಳಿ 62.50 ರೂ
10 ಗ್ರಾಮ್ಗೆ 625 ರೂ
100 ಗ್ರಾಮ್ಗೆ 6,250 ರೂ
1 ಕಿಲೋಗೆ 62,500 ರೂ
ಪೆಟ್ರೋಲ್ ಡೀಸೆಲ್ ದರಗಳಂತೆ ಬೆಳ್ಳಿ ಮತ್ತು ಚಿನ್ನದ ಬೆಲೆ ದೇಶದ ವಿವಿಧೆಡೆ ವ್ಯತ್ಯಾಸ ಹೊಂದಿದೆ. ಕೆಲ ರಾಜ್ಯಗಳಲ್ಲಿ ಚಿನ್ನ ಮತ್ತು ಬೆಳ್ಳಿಗೆ ವಿಧಿಸಲಾಗುವ ತೆರಿಗೆಯಲ್ಲಿ ವ್ಯತ್ಯಾಸ ಇದೆ. ಹೀಗಾಗಿ, ಮುಂಬೈ, ಚೆನ್ನೈನಂಥ ಕೆಲ ನಗರಗಳಲ್ಲಿ ಚಿನ್ನದ ಬೆಲೆ ಬೆಂಗಳೂರಿಗಿಂತ ತುಸು ಕಡಿಮೆ ಇರುತ್ತದೆ. ದೆಹಲಿ ಮೊದಲಾದೆಡೆ ಬೆಲೆ ಹೆಚ್ಚಿದೆ.