ಪ್ರಧಾನಿ ಹುದ್ದೆಯನ್ನು ಮೋದಿ ದುರುಪಯೋಗಪಡಿಸಿಕೊಳ್ಳಬಾರದು ಎಂದು ಉಪಮುಖ್ಯಮಂತ್ರಿ ತಿರುಗೇಟು ನೀಡಿದ್ದಾರೆ.
ರಾಜ್ಯದ ಬಗ್ಗೆ ನರೇಂದ್ರ ಮೋದಿ ಲಘುವಾಗಿ ಮಾತನಾಡುವುದು ಸರಿಯಲ್ಲ. ಅವರಿಗೆ 10, 20% ತಗೋತಾರೆ ಅನ್ನೋ ಮಾಹಿತಿ ಇದ್ರೆ ಜನರಿಗೆ ತಿಳಿಸಬಹುದು. ಕ್ರಮ ತೆಗೆದುಕೊಳ್ಳುವ ಅಧಿಕಾರ ಇದೆ, ಅದನ್ನ ಮಾಡಬಹುದಲ್ವಾ? ರಾಜ್ಯ -ಕೇಂದ್ರ ಸರ್ಕಾರದ ಸಂಬಂಧದಲ್ಲಿ ಅದಕ್ಕೆ ಅವಕಾಶ ಇದೆ. ಅದನ್ನ ಬಿಟ್ಟು ರಾಜಕೀಯ ಕಾರಣಕ್ಕಾಗಿ ಈ ರೀತಿ ಹೇಳೋದು ಸರಿಯಲ್ಲ ಅಂತ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಇನ್ನು, ಇಂತವರ ಮೇಲೆ ರೇಡ್ ಮಾಡಿ ಅಂತಾ ಪಟ್ಟಿ ಕಳಿಸದ ಮೇಲೆ ನಾವೇನು ಮಾಡ್ಬೇಕು? ಸ್ವಾಭಾವಿಕವಾಗಿ ಪ್ರತಿಭಟನೆ ಮಾಡಲೇಬೇಕು ಎಂದರು.
ಎಷ್ಟು ಜನ ಬಿಜೆಪಿಯವರ ಮೇಲೆ ದಾಳಿಯಾಗಿದೆ? ಎಂದು ಪ್ರಶ್ನಿಸಿದ ಡಿಸಿಎಂ, ಕೇವಲ ಕಾಂಗ್ರೆಸ್- ಜೆಡಿಎಸ್ ಮುಖಂಡರು, ಬೆಂಬಲಿಗರ ಮೇಲೆ ದಾಳಿ ಮಾಡೋದು ಯಾಕೆ? ಹೀಗಾಗಿ ನಾವು ಪ್ರತಿಭಟನೆ ಮಾಡಿರೋದು ನಿಜ ಎಂದರು.
ಸುಮಲತಾರಿಗೆ ಭಯ ಇದ್ರೆ ಭದ್ರತೆ ಪಡೆಯಲಿ. ಡಿಜಿಪಿಗೆ ತಿಳಿಸಿ ಭದ್ರತೆ ಪಡೆಯಲಿ. ಚುನಾವಣಾ ಆಯೋಗದ ಮೂಲಕ Z++ ಭದ್ರತೆ ತೆಗೆದುಕೊಳ್ಳಲಿ ಅಂತ ಡಿಸಿಎಂ ಹೇಳಿದ್ರು.