Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭೂಲೋಕದ ಸ್ವರ್ಗ ಎಲ್ಲಿದೆ ಗೊತ್ತಾ...!

ಭೂಲೋಕದ ಸ್ವರ್ಗ ಎಲ್ಲಿದೆ ಗೊತ್ತಾ...!
ಬೆಂಗಳೂರು , ಮಂಗಳವಾರ, 21 ಆಗಸ್ಟ್ 2018 (17:13 IST)
ಜಗತ್ತಿನಲ್ಲಿಯೇ ತನ್ನ ಪ್ರಾಕೃತಿಕ ಸೌಂದರ್ಯಗಳೊಂದಿಗೆ ಗಮನ ಸೆಳೆವ ದೇಶಗಳಲ್ಲಿ ಇಂಡೋನೇಷ್ಯಾ ಕೂಡಾ ಒಂದು. ಇದು ಪೃಕೃತಿ ಸೌಂದರ್ಯವನ್ನು ತನ್ನೊಂದಿಗೆ ಇರಿಸಿಕೊಂಡು ಸಂಸ್ಕೃತಿ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿರುವ ಒಂದು ರಾಷ್ಟ್ರ ಎಂದರೆ ತಪ್ಪಾಗಲಾರಲು ಅದರಲ್ಲೂ ಇಲ್ಲಿರುವ ದ್ವೀಪಗಳು ಪ್ರಪಂಚದ ಸ್ವರ್ಗವೆಂದರೂ ತಪ್ಪಾಗಲಾರದು. ಅಷ್ಟಕ್ಕೂ ನಾವು ಹೇಳ ಹೊರಟಿರೋ ಸ್ಥಳದ ಹೆಸರು ಯಾವುದು ಗೊತ್ತಾ ಬಾಲಿ.
ಸ್ವಚ್ಚಂದವಾಗಿ ಸುತ್ತಾಡಬೇಕು ಇಲ್ಲವೇ ಮಧುಚಂದ್ರದ ಅನುಭವವನ್ನು ನಿಮ್ಮ ನೆನಪಿನ ಪುಟದಲ್ಲಿ ಅವಿಸ್ಮರಣೀಯವಾಗಿರಿಸಬೇಕು. ಅಥವಾ ನಿಮ್ಮ ಪ್ರೇಯಸಿಯನ್ನು ಪ್ರಪೋಸ್‌ ಮಾಡಬೇಕು ಎಂದು ಕೊಂಡರೆ ಬಾಲಿ ಒಂದು ಉತ್ತಮ ಆಯ್ಕೆ ಎಂದರೆ ತಪ್ಪಾಗಲಾರದು. ಇಲ್ಲಿರುವ ಬೀಚುಗಳು ಮನಸ್ಸನ್ನು ಮುದಗೊಳಿಸುವುದರ ಜೊತೆಗೆ ನಿಮ್ಮಲ್ಲಿ ಸಂತೋಷದ ಅಲೆಯನ್ನು ಸೃಷಿಸುವ ಶಕ್ತಿ ಇಲ್ಲಿನ ಪ್ರಕೃತಿಗಿದೆ. ಇಲ್ಲಿರುವ ಪ್ರಕೃತಿಯ ಸೌಂದರ್ಯವನ್ನು ಅನುಭವಿಸುವುದರೊಂದಿಗೆ ದೀರ್ಘವಾದ ರಜೆಯನ್ನು ಕಳೆಯಲು ಕೂಡಾ ಈ ಸ್ಥಳ ಉತ್ತಮವಾಗಿದೆ.
webdunia
ಬಾಲಿ ಒಂದು ಜನಪ್ರಿಯ ಪ್ರವಾಸಿ ತಾಣವಾಗಿದೆ, ಇತ್ತೀಚಿನ ದಿನಗಳಲ್ಲಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಲ್ಲಿನ ವಿಭಿನ್ನ ಸಂಸ್ಕ್ರತಿ ಆಚರಣೆಗಳು ಆಧುನಿಕ ನೃತ್ಯ, ಶಿಲ್ಪಕಲೆ, ಚಿತ್ರಕಲೆ, ಚರ್ಮ, ಲೋಹದ ಕೆಲಸ ಸಂಗೀತವನ್ನು ಒಳಗೊಂಡಂತೆ ಹೆಚ್ಚು ಅಭಿವೃದ್ಧಿ ಹೊಂದಿದ ಕಲೆಗಳಿಗೆ ಬಾಲಿ ಹೆಸರುವಾಸಿಯಾಗಿದೆ. ಅಷ್ಟೇ ಅಲ್ಲ ಇಲ್ಲಿ ಹೆಚ್ಚಾಗಿ ವಿವಿಧ ರೀತಿಯ ಹವಳಗಳನ್ನು ನಾವು ಕಾಣಬಹುದಾಗಿದೆ. ಇಲ್ಲಿ ‘ತೀರ್ಥ ಎಂಪುಲ್’ ಎನ್ನುವ ಒಂದು ನೀರಿನ ಚಿಲುಮೆಯಿದೆ ಇಲ್ಲಿ ಸ್ನಾನ ಮಾಡುವುದರಿಂದ ಆತ್ಮಶುದ್ಧಿ ಆಗುತ್ತದೆ ಎನ್ನುವುದು ಅಲ್ಲಿನ ಜನರ ನಂಬಿಕೆ, ಅಷ್ಟೇ ಅಲ್ಲ ಭಾರತದಲ್ಲಿ ಇರುವ ಸಂಪ್ರದಾಯದಂತೆ ನಾವು ಅಲ್ಲಿ ಪೂಜೆ ಪುನಸ್ಕಾರಾದಿ ಕಾರ್ಯಗಳನ್ನು ಕಾಣಬಹುದು.
webdunia

ಇಲ್ಲಿ ಸಾಕಷ್ಟು ದೇವಸ್ಥಾನಗಳಿದ್ದು ಬಾಲಿಯನ್ನು ಇಂಡೋನೇಷ್ಯಾದ ದೇವರ ದ್ವೀಪ ಎಂದೂ ಕರೆಯುತ್ತಾರೆ. ಬಾಲಿಯಲ್ಲಿ ಭಾರತೀಯ ಹಿಂದು ಸಂಪ್ರದಾಯ ಹಾಗೂ ಹಬ್ಬ ಹರಿದಿನವನ್ನು ಭಾರತೀಯ ಆಚರಣೆಯಂತೆ ಕುಟುಂಬದವರೊಂದಿಗೆ ಸಂಭ್ರಮಿಸುವುದನ್ನು ನಾವು ಕಾಣಬಹುದಾಗಿದೆ.
webdunia
ಬಾಲಿ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದ್ದು ಇಲ್ಲಿನ ಪ್ರತಿಯೊಂದು ದೇವಸ್ಥಾನಗಳು ತನ್ನದೇ ಆದ ಕಲೆಯ ಮೂಲಕ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ ಅಷ್ಟೇ ಅಲ್ಲ, ಇಲ್ಲಿ ಭಾರತದ ರಾಮಾಯಣ ಮಹಾಭಾರತಕ್ಕೂ ಸ್ಥಾನಮಾನವನ್ನು ನೀಡಲಾಗಿದೆ ಅದನ್ನು ಪವಿತ್ರ ಗ್ರಂಥವೆಂದು ಇಲ್ಲಿನ ಜನರು ಪರಿಗಣಿಸುತ್ತಾರೆ. ಇಲ್ಲಿರುವ 20 ಮೀಟರ್ ಎತ್ತರದ ವಿಷ್ಣುವಿನ ಮೂರ್ತಿ ಬಾಲಿಯ ಮತ್ತೊಂದು ಪ್ರಮುಖ ಆಕರ್ಷಣೆ ಎಂದೇ ಹೇಳಬಹುದು. ಇದು ಬಾಲಿಯಲ್ಲಿರುವ ಟಬನಾನ್ ಪಟ್ಟಣದಿಂದ 11ಕಿಮೀ ದೂರದಲ್ಲಿ ತನ್ಹಾ ಲಾಟ್ ಎಂಬ ದೇವಾಲಯದಲ್ಲಿ ಈ ಮೂರ್ತಿಯನ್ನು ನಾವು ಕಾಣಬಹುದಾಗಿದೆ. ಈ ದೇವಾಲಯದ ಸೂತ್ತಲೂ ಹವಳದ ಬಂಡೆಗಳಿದ್ದು ಅದು ದೇವರಿಗೆ ಮಿಸಲಿಟ್ಟಿರುವ ಆಸ್ತಿ ಎಂದು ಅಲ್ಲದೇ ಅದರ ಸೂತ್ತಲೂ ಬಿಳಿಯ ಹಾವು ವಾಸಿಸುತ್ತಾ ಅದನ್ನು ಕಾಯುತ್ತಿದೆ ಎಂದು ಅಲ್ಲಿನ ಜನರು ನಂಬುತ್ತಾರೆ. ಅಷ್ಟೇ ಅಲ್ಲ ಇಲ್ಲಿ ಗಣೇಶೋತ್ಸವ ಅನ್ನು ಕೂಡಾ ಅದ್ದೂರಿಯಾಗಿ ಆಚರಿಸುತ್ತಾರೆ ಇದು ಒಂದು ಸಾರ್ವತ್ರಿಕ ಹಬ್ಬವಾಗಿ ಇಲ್ಲಿ ನೆಡೆಸಲ್ಪಡುತ್ತದೆ.
webdunia
ಇಲ್ಲಿನ ಬೀಚುಗಳ ಕುರಿತು ವರ್ಣೀಸಲು ಸಾಧ್ಯವಾಗುವುದಿಲ್ಲ ಅಷ್ಟೇ ಅಲ್ಲ ನೀವು ಏನಾದರೂ ಸರ್ಫಿಂಗ್ ಪ್ರಿಯರಾಗಿದ್ದಲ್ಲಿ ಇದು ನಿಮಗೆ ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿನ ಸಮುದ್ರದಲ್ಲಿ ಲಕ್ಷಾಂತರ ಪ್ರವಾಸಿಗರು ಸರ್ಫಿಂಗ್ ಮಾಡುವುದಕ್ಕಾಗಿಯೇ ಬರುತ್ತಾರೆ ಎನ್ನುವುದು ಇನ್ನೊಂದು ವಿಶೇಷ. ಇಲ್ಲಿನ ಸಮುದ್ರಗಳು ಸಮತಟ್ಟಾಗಿದ್ದು ಬಿಳಿ ಮರಳಿಂದ ಕೂಡಿದೆ, ಇಲ್ಲಿನ ನೀರು ನೀಲಿ ಬಣ್ಣವನ್ನು ಹೊಂದಿರುವಂತೆ ತೋರುತ್ತದೆ. ಇದರಿಂದ ಸಮುದ್ರವು ಇನ್ನಷ್ಟು ಸೊಗಸಾಗಿ ಕಂಡುಬರುತ್ತದೆ. ಇಲ್ಲಿ ಹೆಚ್ಚಾಗಿ ತಾಳೆ ಮರಗಳು ಕಂಡುಬರುತ್ತವೆ ಅದಲ್ಲದೇ ಇಲ್ಲಿ ಮತ್ತೊಂದು ವಿಶೇಷವಿದೆ ಅದೇ ಇಲ್ಲಿನ ನೃತ್ಯ ಹೌದು ಇಲ್ಲಿನ ನೃತ್ಯ ಸಂಸ್ಕ್ರತಿಯು ಬಾಲಿಯ ಸೊಬಗನ್ನು ಇಮ್ಮಡಿಗೊಳಿಸುತ್ತದೆ ಎಂದರೆ ಅತಿಶಯೋಕ್ತಿ ಆಗಲಾರದು. ಇಲ್ಲಿನ ನೃತ್ಯ ಮತ್ತು ಸಂಗೀತಕ್ಕೆ ಮನಸೋಲದವರೇ ಯಾರು ಇಲ್ಲ ಎನ್ನಬಹುದು ಅದರಲ್ಲೂ ರಾಮಾಯಣದ ನೃತ್ಯ ಮತ್ತು ಮಯೂರ ನೃತ್ಯಗಳು ತುಂಬಾನೇ ಜನಪ್ರಿಯವಾಗಿದ್ದು ಇದರಲ್ಲಿರುವ ವೇಶಭೂಷಣ ನಮ್ಮ ದಕ್ಷಿಣ ಭಾರತದ ಯಕ್ಷಗಾನವನ್ನು ಹೋಲುತ್ತದೆ ಎನ್ನಬಹುದು. ಬಾಲಿಗೆ ಬರುವಂತ ಪ್ರತಿಯೊಬ್ಬ ಪ್ರವಾಸಿಯು ಬಾಲಿಯ ಈ ನೃತ್ಯವನ್ನು ನೋಡದೇ ಹೋಗಲಾರ ಅಂದರೆ ಅದರ ಆಕರ್ಷಣೆ ಎಷ್ಟಿರಬಹುದು ಎಂದು ನೀವೇ ಊಹಿಸಿಕೊಳ್ಳಿ. 
webdunia
ಇನ್ನು ವಾಸ್ತುಶಿಲ್ಪಕ್ಕೆ ಹೋಲಿಸಿದರೆ ಇಲ್ಲಿನ ದೇವಸ್ಥಾನ ಮತ್ತು ಅದರ ಕೆತ್ತನೆಗಳು ನಮ್ಮನ್ನು ಆಕರ್ಷಿಸುತ್ತದೆ ಇಲ್ಲಿನ ದೇವಾಲಯಗಳು ಭಾರತದ ದೇವಾಲಯಗಳಿಗೆ ಹೋಲಿಸಿದರೆ ತುಂಬಾ ಭಿನ್ನವಾಗಿದ್ದು ಬೌದ್ಧ ಸಂಸ್ಕೃತಿಯ ಸಮ್ಮಿಶ್ರಣವನ್ನು ನಾವಿಲ್ಲಿ ಕಾಣಬಹುದು ಚೌಕಾಕಾದರ ಮೇಲ್ಛಾವಣಿ ಅದರ ತುದಿಗಳು ಆಕಾಶವನ್ನು ನೋಡುತ್ತಿರುವಂತೆ ನಿರ್ಮಿಸುವ ಕಲೆಗೆ ಮನಸೋಲದವರೇ ಇಲ್ಲ ಅಲ್ಲದೇ ಇಲ್ಲಿನ ಹೊಟೇಲ್‌ಗಳು ಲಾಡ್ಜ್‌ಗಳು ವಿಲ್ಲಾಗಳು ಐಶಾರಾಮಿ ಹೊಟೇಲ್‌ಗಳು ಗುಡಿಸಲು ಮಾದರಿಯಲ್ಲಿ ಸಮುದ್ರಕ್ಕೆ ತಾಗಿ ನಿರ್ಮಾಣಗೊಂಡ ಕೋಣೆಗಳು ಕಾಟೇಜ್‌ಗಳು ಮತ್ತೊಂದು ಆಕರ್ಷಣೆ ಎನ್ನಬಹುದು. ಇಲ್ಲಿ ನೀರಿನ ಮೇಲೆ ಕಾಟೇಜ್‌ ಮಾದರಿಯಲ್ಲಿ ರೂಂಗಳನ್ನು ನಿರ್ಮಿಸಿ ಅಲ್ಲಿ ಪ್ರವಾಸಿಗರು ತಂಗಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಅಲ್ಲದೇ ವಿಶೇಷ ರಿಯಾಯಿತಿ ದರಗಳ ಆಫರ್‌ಗಳನ್ನು ನೀವು ಇಂತಹ ಕಾಟೇಜ್ ಮತ್ತು ಐಶಾರಾಮಿ ಲಾಡ್ಜ್‌ಗಳನ್ನು ಪಡೆಯಬಹುದು. ಇಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ನೋಡುವುದೇ ಚೆನ್ನ ಮಂಚಿನ ಮಬ್ಬಿನಲಿ ಸೂರ್ಯ ಉದಯಿಸುತ್ತಿರುವ ಸನ್ನಿವೇಶವನ್ನು ಕಣ್ತುಂಬಿಕೊಳ್ಳಲೆಂದೇ ಇಲ್ಲಿ ಸಾವಿರಾರು ಪ್ರವಾಸಿಗರು ಬರುತ್ತಾರೆ ಅಷ್ಟೇ ಅಲ್ಲ ಇಲ್ಲಿ ಸೂರ್ಯಾಸ್ತವು ಅಷ್ಟೇ ನೋಡಲು ತುಂಬಾ ಸೊಗಸಾಗಿರುತ್ತದೆ
webdunia
ಒಟ್ಟಿನಲ್ಲಿ ನೀವು ಬದುಕಿರುವಾಗ ಒಮ್ಮೆಯಾದರೂ ಸ್ವರ್ಗವನ್ನು ನೋಡಬೇಕು ಎಂದುಕೊಂಡರೆ ಒಮ್ಮೆ ನೀವು ಬಾಲಿಗೆ ಭೇಟಿ ನೀಡಲೇಬೇಕು. ಬಾಲಿ ನಿಮ್ಮ ಜೀವನದ ಒಂದು ಉತ್ತಮ ಅವಿಸ್ಮರಣೀಯ ನೆನಪುಗಳನ್ನು ಕಟ್ಟಿಕೊಡುವುದರಲ್ಲಿ ಯಾವುದೇ ಸಂಶಯವಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಅನಾಥಾಶ್ರಮದ ಮಕ್ಕಳಿಗಾಗಿ ನಿಕ್ ಜೊನಾಸ್ ಹಾಡುತ್ತಿರುವ ವೀಡಿಯೋ ಹಂಚಿಕೊಂಡ ಪ್ರಿಯಾಂಕಾ..