Webdunia - Bharat's app for daily news and videos

Install App

ಹೆಸರಿಲ್ಲದ ಊರಿನಲ್ಲಿ ನೀರ ಮೇಲೆ ವಾಸ....ವಿಚಿತ್ರ ಆದರೂ ಸತ್ಯ...!

ಗುರುಮೂರ್ತಿ
ಗುರುವಾರ, 8 ಫೆಬ್ರವರಿ 2018 (15:49 IST)
ಹಂಚಿನ ಮನೆಗಳು, ಬಂಗಲೆಗಳು, ಗುಡಿಸಲುಗಳಲ್ಲಿ ಇಲ್ಲವೇ ಹಡಗುಗಳ ಮೇಲೆ ಗುಡಿಸಲು ಕಟ್ಟಿ ಅಲ್ಲಿ ವಾಸಿಸುವುದನ್ನು ನೀವು ನೋಡಿರುತ್ತೀರಿ. ಆದರೆ ವರ್ಷ ಪೂರ್ತಿ ನೀರಿನ ಮೇಲೆ ಗುಡಿಸಲು ಕಟ್ಟಿ ವಾಸಿಸುವರನ್ನು ನೋಡಿದ್ದೀರಾ..! ಅದನ್ನು ನೀವು ಊಹಿಸಲು ಸಾಧ್ಯವಿಲ್ಲ ಆದ್ರೆ ಇದು ನಿಜ. ಯಾವುದೇ ಸಂಪರ್ಕ ಸಾಧನ, ವಿದ್ಯುತ್‌‍ಶಕ್ತಿ ನೆರವಿಲ್ಲದೇ ಇಂದಿನ ಆಧುನಿಕ ಕಾಲದಲ್ಲೂ ಜನರು ಈ ರೀತಿಯಾಗಿ ಬದುಕುತ್ತಿರುವುದನ್ನು ಕೇಳಿದರೆ ನೀವು ಅಚ್ಚರಿ ಪಡದೇ ಇರಲಾರಿರಿ.
ಈ ತರಹದ ಯಾವುದೇ ಮೂಲಭೂತ ಸಂಪರ್ಕಗಳಿಲ್ಲದೇ ನೆಮ್ಮದಿಯಿಂದ ಜೀವನ ಸಾಗಿಸುತ್ತಿರುವ ಒಂದು ಜನಾಂಗ ಇರುವುದು ದಕ್ಷಿಣ ಏಷ್ಯಾದ ಮಲೇಷಿಯಾ ಮತ್ತು ಫಿಲಿಪೈನ್ಸ್‌‌ನಲ್ಲಿ ಕಂಡುಬರುವ ಸಮುದ್ರದ ಹಿನ್ನೀರು ಪ್ರದೇಶದ ದ್ವೀಪಗಳಲ್ಲಿ, ಈ ಹಿನ್ನಿರು ಪ್ರದೇಶ ಅಥವಾ ದ್ವೀಪಗಳಿಗೆ ಯಾವುದೇ ಹೆಸರಿಲ್ಲ. ಅಷ್ಟೇ ಅಲ್ಲ, ಅಲ್ಲಿ ವಾಸಿಸುವ ಯಾರೊಬ್ಬರಿಗೂ ಆ ದೇಶದ ಪೌರತ್ವವಿಲ್ಲ ಆದರೂ ಅವರು ಅಲ್ಲೇ ಬದುಕನ್ನು ಕಟ್ಟಿಕೊಂಡು ಸ್ವತಂತ್ರವಾಗಿ ಬದುಕುತ್ತಿದ್ದಾರೆ. ಇವರಿಗೆ ನಿನ್ನೆ ನಾಳೆಗಳ ಚಿಂತೆ ಇಲ್ಲ. ದಿನನಿತ್ಯದ ಜೀವನಕ್ಕೆ ಇವರು ಅವಲಂಬಿಸಿರುವುದು ಸಮುದ್ರವನ್ನೇ, ಇದೇ ಅವರ ಮನೆ, ಇದೇ ಅವರ ಆಟ ಪಾಠ ಎಲ್ಲವೂ.
ಇದೊಂದು ಬುಡಕಟ್ಟು ಜನಾಂಗವಾಗಿದ್ದು ಅವರನ್ನು ಬಜೌ ಬುಡಕಟ್ಟಿನವರು ಎಂದೇ ಈ ಪ್ರದೇಶದಲ್ಲಿ ಕರೆಯುತ್ತಾರೆ. ಈ ಬುಟಕಟ್ಟು ಜನರು ಸಮುದ್ರದ ತೀರದಲ್ಲಿ ನೀರಿನ ಮೇಲೆ ಗುಡಿಸಲು ನಿರ್ಮಿಸಿಕೊಂಡು ಅಲ್ಲಿಯೇ ವಾಸಿಸುತ್ತಾರೆ. ಇದು ಅವರ ಪರಂಪರೆಯಾಗಿದ್ದು ಅನಾದಿ ಕಾಲದಿಂದ ಬಂದ ಪದ್ಧತಿಯಾಗಿದೆಯಂತೆ. ಈ ದ್ವೀಪಗಳಲ್ಲಿ ಈ ಬುಡಕಟ್ಟಿನ ಹಲವಾರು ಜನರಿದ್ದು, ಮಲೇಷಿಯಾದ್ಯಾದಂತ ಇಂತಹ ಬುಡಕಟ್ಟು ಸಂಸ್ಕೃತಿಯನ್ನು ನಾವು ಕಾಣಬಹುದಾಗಿದೆ. ಅಲ್ಲಿ ವಾಸಿಸುವ ಜನರಿಗೆ ಯಾವುದೇ ರೀತಿಯ ಶಿಕ್ಷಣವಿರುವುದಿಲ್ಲ ಅವರು ಪರಸ್ಪರ ಸಂವಹನ ನೆಡೆಸುವುದು ತಮ್ಮ ಬುಡಕಟ್ಟಿನ ಭಾಷೆಯಲ್ಲಿ ಮಾತ್ರ.
ಈ ಬುಡಕಟ್ಟು ಜನಾಂಗದ ಕುಲ ಕಸುಬು ಮೀನುಗಾರಿಕೆಯಾಗಿದ್ದು, ಪ್ರತಿದಿನದ ಉಟೋಪಚಾರಕ್ಕೆ ಅವರು ಮೀನುಗಳು ಮತ್ತು ಸಮುದ್ರದಲ್ಲಿ ಸಿಗುವಂತ ಆಹಾರ ಪದಾರ್ಥವನ್ನೇ ತಮ್ಮ ಆಹಾರವಾಗಿ ಬಳಸುತ್ತಾರೆ. ಇಲ್ಲಿನ ಮಕ್ಕಳಿಗೆ ಸಮುದ್ರವೇ ಪಾಠಶಾಲೆ. ಇಲ್ಲಿ ಚಿಕ್ಕಂದಿನಿಂದಲೇ ಮಕ್ಕಳಿಗೆ ಮೀನು ಹಿಡಿಯುವುದು ಮತ್ತು ದೋಣಿ ನಡೆಸುವುದನ್ನು ಕಲಿಸಲಾಗುತ್ತದೆ. ಈ ಜನಾಂಗದ ಮಹಿಳೆಯರು ಕೂಡಾ ದೋಣಿ ನೆಡೆಸುವುದರಲ್ಲಿ ಪರಿಣಿತಿಯನ್ನು ಹೊಂದಿದ್ದು, ಮೀನು ಹಿಡಿಯುವ ಕಲೆ ಇವರಿಗೂ ರೂಢಿಗತವಾಗಿರುತ್ತದೆ. ಇದು ಈ ಬುಡಕಟ್ಟು ಜನಾಂಗದಲ್ಲಿ ಪರಂಪರಾಗತವಾಗಿ ರೂಢಿಸಿಕೊಂಡು ಬಂದ ಸಂಪ್ರದಾಯವಾಗಿರುವುದರಿಂದ ಅದನ್ನು ಇಂದಿನ ಆಧುನಿಕ ಯುಗದಲ್ಲೂ ಮುಂದುವರೆಸಿಕೊಂಡು ಹೋಗುತ್ತಿರುವುದು ವಿಶೇಷವೆಂದೇ ಹೇಳಬಹುದು.
ಇವರು ನೀರಿನ ಮೇಲೆ ಅಚ್ಚುಕಟ್ಟಾಗಿ ಮನೆಯನ್ನು ನಿರ್ಮಿಸುವ ಕಲೆಯಲ್ಲಿ ಸಿದ್ಧಹಸ್ತರಾಗಿದ್ದು, ಮರದ ವಸ್ತುಗಳನ್ನು ಬಳಸಿ ಅಚ್ಚುಕಟ್ಟಾಗಿ ಗುಡಿಸಲನ್ನು ನಿರ್ಮಿಸುತ್ತಾರೆ. ಅಲ್ಲದೇ ಒಂದು ಗುಡಿಸಲಿನಿಂದ ಇನ್ನೊಂದು ಗುಡಿಸಲಿಗೆ ಹೋಗಲು ಸಂಪರ್ಕಕ್ಕಾಗಿ ಮರದ ಹಲಗೆಗಳನ್ನು ಪ್ರತಿ ಗುಡಿಸಲಿನ ನಡುವೆ ಅಡ್ಡಲಾಗಿ ಕಟ್ಟುತ್ತಾರೆ. ಇದರ ಮೂಲಕ ಒಂದು ಗುಡಿಸಲಿನಿಂದ ಇನ್ನೊಂದು ಗುಡಿಸಲಿಗೆ ಸುಲಭವಾಗಿ ಪ್ರಯಾಣಿಸುತ್ತಾರೆ.
ಈ ಬುಡಕಟ್ಟಿನ ಭಾಷೆಗೆ ಯಾವುದೇ ಲಿಪಿ ಇಲ್ಲದಿರುವ ಕಾರಣ ಇವರಿಗೆ ಬರವಣಿಗೆ ಎಂದರೆ ಏನು ಎನ್ನುವುದೇ ತಿಳಿದಿಲ್ಲ. ಅಲ್ಲದೇ ಬೇರೆ ಭಾಷೆಯ ಜ್ಞಾನವಿಲ್ಲದಿರುವುದು ಇವರು ಇನ್ನೂ ಹಿಂದುಳಿದಿರುವುದಕ್ಕೆ ಕಾರಣ ಎನ್ನುತ್ತಾರೆ ಕೆಲವರು. ಒಟ್ಟಿನಲ್ಲಿ ನಾಗರೀಕತೆ ಬೆಳೆಯುತ್ತಿದ್ದರೂ ಇಂದಿನ ನವಯುಗಕ್ಕೆ ಸೆಡ್ಡುಹೊಡೆದು ಹಿಂದಿನ ಪರಂಪರೆಗೆ ಹೊಂದಿಕೊಂಡು ಸಾಗುತ್ತಿರುವ ಇವರ ಬದುಕು ವಿಚಿತ್ರವಾದರೂ ಅಚ್ಚರಿ ಎಂದೇ ಹೇಳಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments