Webdunia - Bharat's app for daily news and videos

Install App

ಕುಕ್ಕೆ ಕ್ಷೇತ್ರದಲ್ಲಿ ಬರೋಬ್ಬರಿ ₹146.01 ಕೋಟಿ ಆದಾಯ: ರಾಜ್ಯದಲ್ಲೇ ಅಗ್ರಸ್ಥಾನ

Sampriya
ಭಾನುವಾರ, 7 ಏಪ್ರಿಲ್ 2024 (10:07 IST)
Photo Courtesy X
ಮಂಗಳೂರು: ನಾಡಿನ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು 2023-24ನೇ ಆರ್ಥಿಕ ವರ್ಷದಲ್ಲಿ ₹146.01 ಕೋಟಿ ಆದಾಯ ಗಳಿಸಿದೆ.
ಈ ಮೂಲಕ ಸತತ 13ನೇ ವರ್ಷ ಆದಾಯದಲ್ಲಿ ರಾಜ್ಯದ ಮೊದಲ ದೇವಸ್ಥಾನವಾಗಿದೆ. ಕಳೆದ ವರ್ಷ ದೇವಳವು ₹ 123 ಕೋಟಿ ಆದಾಯ ಗಳಿಸಿತ್ತು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಗುತ್ತಿಗೆ, ತೋಟದ ಉತ್ಪನ್ನ, ಕಟ್ಟಡ ಬಾಡಿಗೆ, ಕಾಣಿಕೆ, ಕಾಣಿಕೆ ಹುಂಡಿ, ಹರಕೆ ಸೇವೆ, ಅನುದಾನ, ಶಾಶ್ವತ ಸೇವೆಗಳಿಂದ ಆದಾಯ ಬರುತ್ತಿದೆ. ದೇವಳದ ಆದಾಯದ ಲೆಕ್ಕಾಚಾರ ಈಗಾಗಲೇ ಮುಗಿದಿದೆ. ಸೇವೆ, ಕಾಣಿಕೆ ಮೊದಲಾದುವುಗಳಿಂದ ಬಂದ ಆದಾಯದ ವಿಭಜನೆ ನಡೆಯುತ್ತಿದ್ದು, ಈ ಲೆಕ್ಕಾಚಾರ ಇನ್ನೆರಡು ದಿನಗಳಲ್ಲಿ ಸಿಗಲಿದೆ ಎಂದು ಮುಜರಾಯಿ ಆಯುಕ್ತರು ತಿಳಿಸಿದ್ದಾರೆ.

2006-07ರಲ್ಲಿ ದೇವಳದ ಆದಾಯವು ₹ 19.76 ಕೋಟಿ ಆಗಿತ್ತು. 2007-08ರಲ್ಲಿ ₹ 24.44 ಕೋಟಿಗೆ ಹೆಚ್ಚಾಗಿ ರಾಜ್ಯದ ಶ್ರೀಮಂತ ದೇವಾಲಯವಾಗಿ ಗುರುತಿಸಿಕೊಂಡಿತ್ತು. 2008-09ರಲ್ಲಿ ₹ 31 ಕೋಟಿ, 2009-10ರಲ್ಲಿ ₹ 38.51 ಕೋಟಿ, 2011-12ರಲ್ಲಿ ₹ 56.24 ಕೋಟಿ, 2012-13ರಲ್ಲಿ ₹ 66.76 ಕೋಟಿ, 2013-14ರಲ್ಲಿ ₹ 68 ಕೋಟಿ, 2014-15ರಲ್ಲಿ ₹ 77.60 ಕೋಟಿ, 2015-16ರಲ್ಲಿ ₹ 88.83 ಕೋಟಿ 2016-17ರಲ್ಲಿ ₹ 89.65 ಕೋಟಿ, 2017-18ರಲ್ಲಿ ₹ 95.92 ಕೋಟಿ, 2018-19ರಲ್ಲಿ ₹ 92.09 ಕೋಟಿ, 2019-20ರಲ್ಲಿ ₹ 98.92 ಕೋಟಿ, 2020-21ರಲ್ಲಿ ₹ 68.94 ಕೋಟಿ, 2021-22ರಲ್ಲಿ ₹ 72.73 ಕೋಟಿ, 2022-23ನೇ ಸಾಲಿನಲ್ಲಿ ₹ 123 ಕೋಟಿ ಆದಾಯ ಗಳಿಸಿತ್ತು.

ಮುಜರಾಯಿ ಇಲಾಖೆ ವ್ಯಾಪ್ತಿಯ ಕೊಲ್ಲೂರು ಮೂಕಾಂಬಿಕಾ ದೇವಳ ₹ 68.23 ಕೋಟಿ, ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ ₹ 30.73 ಕೋಟಿ, ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನ ₹ 25.80 ಕೋಟಿ, ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ ₹ 15.27 ಕೋಟಿ, ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಿ ದೇವಸ್ಥಾನ ₹ 16.29 ಕೋಟಿ, ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ₹ 13.65 ಕೋಟಿ, ಬೆಂಗಳೂರಿನ ಬನಶಂಕರಿ ದೇವಸ್ಥಾನ ₹ 11.37 ಕೋಟಿ ಆದಾಯ ಗಳಿಸಿವೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

I Stand With You: ಬೆಂಗಳೂರಿನ ಜನತೆಗೆ ಧೈರ್ಯ ತುಂಬಿದ ಡಿಕೆ ಶಿವಕುಮಾರ್‌

ಬೆಂಗಳೂರು ಮುಳುಗಿರುವಾಗ ಸಾಧನೆ ಸಮಾವೇಶ ಯಾಕೋ: ವಿಜಯೇಂದ್ರ ಲೇವಡಿ

Bengaluru Rains: ಬೆಂಗಳೂರಿನಲ್ಲಿ ಮಳೆ ಬಂದಾಗ ಸಮಸ್ಯೆಯಾಗೋದು ಹೊಸದೇನಲ್ಲ: ಡಿಕೆ ಶಿವಕುಮಾರ್

Bengaluru Rains: ಗ್ರೇಟರ್ ಬೆಂಗಳೂರು ಅಲ್ಲ ಇದು ವಾಟರ್ ಬೆಂಗಳೂರು

ಸಿಲಿಕಾನ್‌ ಸಿಟಿಯಲ್ಲಿ ಮಹಾಮಳೆಗೆ ಮೊದಲ ಬಲಿ: ಗೋಡೆ ಕುಸಿದು ಮಹಿಳಾ ಉದ್ಯೋಗಿ ಸಾವು

ಮುಂದಿನ ಸುದ್ದಿ
Show comments