15 ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿರಾಜಿನ್ ಬಾಷಾ ಅರ್ಜಿ ಜೊತೆಗೆ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಎರಡೂ ಅರ್ಜಿಗಳನ್ನ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.
15 ಡಿನೋಟಿಫಿಕೇಶನ್ ಪ್ರಕರಣಗಳನ್ನ ರಾಜ್ಯ ಹೈಕೋರ್ಟ್ ರದ್ದುಪಡಿಸಿತ್ತು. ಬಳಿಕ ಸಿರಾಜಿನ್ ಬಾಷಾ ಮತ್ತು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್`ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. 8 ವಾರಗಳ ಬಳಿಕ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.
15 ಡಿನೋಟಿಫಿಕೇಶನ್ ಪ್ರಕರಣಗಳು ರದ್ದಾದ ಬಳಿಕ ನಿರಾಳರಾಗಿದ್ದ ಮಾಜಿ ಸಿಎಂ ಯಡಿಯೂರಪ್ಪ ಮತ್ತೆ ವಿಚಾರಣೆ ಎದುರಿಸಬೇಕಿದೆ. ಇದರ ಜೊತೆಗೆ ಎಸಿಬಿಯಲ್ಲೂ ಮತ್ತೆರಡು ಹೊಸ ಎಫ್ಐಆರ್`ಗಳೂ ದಾಖಲಾಗಿದ್ದು, ಯಡಿಯೂರಪ್ಪ ನಿದ್ದೆಗೆಡಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ