ವಿಶಾಲ್ ಸಿಕ್ಕ ರಾಜೀನಾಮೆ ಬಳಿಕ ಇನ್ಫೋಸಿಸ್`ಗೆ ಆಧಾರ್ ಮಾಸ್ಟರ್ ಮೈಂಡ್ ನಂದನ್ ನಿಲೇಕಣಿ ಎಂಟ್ರಿ ಕೊಟ್ಟಿದ್ದಾರೆ. ನಾನ್ ಎಕ್ಸಿಕ್ಯೂಟಿವ್ ಛೇರ್ಮನ್ ಆಗಿ ನಂದನ್ ನಿಲೆಕಣಿ ಕಳೆದ ರಾತ್ರಿ ಅಧಿಕಾರ ಸ್ವೀಕರಿಸಿದ್ದಾರೆ.
ಬಳಿಕ ಮಾತನಾಡಿದ ಅವರು, ಇನ್ಪೋಸಿಸ್`ಗೆ ಸ್ಥಿರತೆ ತರುವಲ್ಲಿ ಪ್ರಯತ್ನ ನಡೆಸುತ್ತೇನೆ. ದೇಶದ 2ನೇ ಅತಿ ದೊಡ್ಡ ಐಟಿ ಸಂಸ್ಥೆಯಲ್ಲಿ ಯಾವುದೇ ಅಸಭ್ಯ ರಾಗಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.ಅಧಿಕಾರ ಸ್ವೀಕರಿಸಿದ ಕೆಲವೇ ಗಂಡೆಗಳಲ್ಲಿ ಕಾನ್ಫರೆನ್ಸ್ ಕಾಲ್ ಮೂಲಕ ಹೂಡಿಕೆದಾರರ ಮನವೊಲಿಸಿ ಕಂಪನಿಯ ಹಾನಿ ನಿಯಂತ್ರಣದ ಪ್ರಯತ್ನ ನಡೆಸಿದರು.
ಕಳೆದ ಕೆಲವು ತಿಂಗಳುಗಳಲ್ಲಿ ಸಂಸ್ಥಾಪಕರು ಮತ್ತು ಆಡಳಿತ ಮಂಡಳಿ ನಡುವೆ ಆಡಳಿತ ವಿಷಯಕ್ಕೆ ಸಂಬಂಧಿಸಿದಂತೆ ಏರ್ಪಟ್ಟಿದ್ದ ಕೆಲ ಭಿನ್ನಾಭಿಪ್ರಾಯಗಳಿಂದ ಭಿನ್ನಾಭಿಪ್ರಾಯದಿಂದ ಕಂಪನಿ ಜರ್ಜರಿತವಾಗಿದೆ. ಅದರ ಪರಿಣಾಮವಾಗಿ ವಿಶಾಲ್ ಸಿಕ್ಕ ರಾಜೀನಾಮೆ ನೀಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ