Webdunia - Bharat's app for daily news and videos

Install App

ವಕ್ಫ್ ಆಸ್ತಿ 20 ಸಾವಿರ ಎಕರೆ ಇದೆ ಅದನ್ನು ಕೇಳ್ತಿದ್ದೀವಷ್ಟೇ: ಜಮೀರ್ ಅಹ್ಮದ್

Krishnaveni K
ಸೋಮವಾರ, 27 ಜನವರಿ 2025 (11:21 IST)
ಬೆಂಗಳೂರು: ವಕ್ಫ್ ಭೂಕಬಳಿಕೆ ಆರೋಪದ ಬಗ್ಗೆ ಸಚಿವ ಜಮೀರ್ ಅಹ್ಮದ್ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ವಕ್ಫ್ ಆಸ್ತಿ 20 ಸಾವಿರ ಎಕರೆಯಷ್ಟಿದೆ. ಅದನ್ನು ವಾಪಸ್ ಕೇಳ್ತಿದ್ದೀವಷ್ಟೇ ಎಂದಿದ್ದಾರೆ.

ಕೆಲವು ಸಮಯದ ಹಿಂದೆ ವಕ್ಫ್ ಮಂಡಳಿ ರಾಜ್ಯದ ಹಲವು ರೈತರು, ದೇವಾಲಯ, ಮಠಗಳ ಆಸ್ತಿಗಳಿಗೆ ನೋಟಿಸ್ ನೀಡಿ ಭಾರೀ ವಿವಾದ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಸಚಿವ ಜಮೀರ್ ಅಹ್ಮದ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ವಿಪಕ್ಷ ಬಿಜೆಪಿ ಹೋರಾಟವನ್ನೇ ಶುರು ಮಾಡಿತ್ತು.

ಆಗಲೇ ವಕ್ಫ್ ಹೆಸರಿನಲ್ಲಿರುವ ಆಸ್ತಿ ಮಾತ್ರ ನಾವು ವಶಪಡಿಸಿಕೊಳ್ಳುತ್ತಿರುವುದು ಎಂದು ಜಮೀರ್ ಅಹ್ಮದ್ ಹೇಳಿದ್ದರು. ಇದೀಗ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿ ವಕ್ಫ್ ಗೆ ಸೇರಬೇಕಾದ ಆಸ್ತಿಯನ್ನಷ್ಟೇ ಕೇಳುತ್ತಿದ್ದೇವೆ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.

ರಾಜ್ಯದಲ್ಲಿ ವಕ್ಫ್ ಹೆಸರಿನಲ್ಲಿ 20 ಸಾವಿರ ಎಕರೆ ಆಸ್ತಿಯಿದೆ. ಇದರಲ್ಲಿ 17 ಸಾವಿರ ಎಕರೆ ಮುಸ್ಲಿಮರೇ ಅತಿಕ್ರಮಣ ಮಾಡಿದ್ದಾರೆ. ಅದನ್ನಷ್ಟೇ ವಾಪಸ್ ಕೊಡಿ ಎಂದು ನಾವು ಕೇಳುತ್ತಿದ್ದೇವೆ. ಆದರೆ ಬಿಜೆಪಿಯವರು ಇದನ್ನೇ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Rahul Gandhi: ಪಾಕಿಸ್ತಾನದ ಮುಂದೆ ನಮ್ಮ ಎಷ್ಟು ವಿಮಾನ ಕಳೆದುಕೊಂಡಿತು ಲೆಕ್ಕ ಕೊಡಿ

ಟರ್ಕಿ ಸೇಬು ಬಹಿಷ್ಕಾರಕ್ಕೆ ಹೆಚ್ಚಿದ ಒತ್ತಾಯ: 24ರಂದು ಪ್ರಧಾನಿಯೊಂದಿಗೆ ಚರ್ಚೆ

India Pakistan: ತಿನ್ನೋದು ಭಾರತದ ಅನ್ನ, ಸೇವೆ ಮಾತ್ರ ಪಾಕಿಸ್ತಾನಕ್ಕೆ: ಯುಪಿ ವ್ಯಕ್ತಿ ಅರೆಸ್ಟ್

ನಿಮ್ಮ ಪ್ರಾಮಾಣಿಕತೆಯನ್ನು ಮೆಚ್ಚಿದೆ: ಡಿಕೆ ಶಿವಕುಮಾರ್‌ಗೆ ಟಾಂಗ್ ಕೊಟ್ಟ ಸಂಸದ ತೇಜಸ್ವಿ ಸೂರ್ಯ

I Stand With You: ಬೆಂಗಳೂರಿನ ಜನತೆಗೆ ಧೈರ್ಯ ತುಂಬಿದ ಡಿಕೆ ಶಿವಕುಮಾರ್‌

ಮುಂದಿನ ಸುದ್ದಿ
Show comments