Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಆರೋಪಿಯನ್ನು ಕಸ್ತೂತಿ ರಮೇಶ್ ಬಾಬು (35) ಮತ್ತು ಸಹೋದರಿ ರಾಮೇಶ್ವರಿ ಎಂದು ಗುರುತಿಸಲಾಗಿದೆ. ಮಹಾರಾಷ್ಟ್ರದ ಪುಣೆ ಮೂಲದ ರಮೇಶ್ ಬಾಬು, ವಿದ್ಯಾವಂತನಾಗಿದ್ದು, ಕೆಲವು ವರ್ಷಗಳ ಹಿಂದೆ ಹೈದರಾಬಾದ್ನ ಬಂಡ್ಲಗುಡ ಜಾಗೀರ್ ಕಾಳಿ ಮಂದಿರದ ಬಳಿಯಿರುವ ಶೆಡ್ ಒಂದರಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಅದೇ ಏರಿಯಾದ ಯುವತಿಯೊಬ್ಬಳ ಪ್ರೀತಿಯ ಬಲೆಯಲ್ಲಿ ಬಿದ್ದು, ಮದುವೆ ಆಗಿ ಜೀವನ ನಡೆಸುತ್ತಿದ್ದ. ರಮೇಶ್ ಬಾಬು ತಂಗಿ ಕೆ. ರಾಮೇಶ್ವರಿ ಹೈದರಾಬಾದ್ನಲ್ಲಿರುವ ಕಾಲೇಜ್ ಒಂದರಲ್ಲಿ ಮೆಡಿಕಲ್ ಕೋರ್ಸ್ ಓದುತ್ತಿದ್ದಳು.
ಲಾಕ್ಡೌನ್ನಲ್ಲಿ ಕೆಲಸ ಕಳೆದುಕೊಂಡ ರಮೇಶ್ ಬಾಬು ಆರ್ಥಿಕ ಸಂಕಷ್ಟಕ್ಕೆ ಸಿಲುಕ್ಕಿದ್ದ. ಇದರ ನಡುವೆ ಆತನ ಕಣ್ಣಿಗೆ ಕಂಡಿದ್ದು, ನಕಲಿ ನೋಟುಗಳನ್ನು ಪ್ರಿಂಟ್ ಮಾಡುವ ಯೂಟ್ಯೂಬ್ ವಿಡಿಯೋ. ಬಳಿಕ ನಕಲಿ ನೋಟುಗಳನ್ನು ಪ್ರಿಂಟ್ ಮಾಡಲು ಆರಂಭಿಸಿ, ಅವುಗಳನ್ನು ಏಜೆಂಟ್ ಮೂಲಕ ವಿನಿಮಯ ಮಾಡಿಕೊಳ್ಳುತ್ತಿದ್ದ. ಅಣ್ಣ-ತಂಗಿ ಇಬ್ಬರು ಅನೇಕ ಬಾರಿ ದೆಹಲಿಗೆ ಭೇಟಿ ನೀಡಿದ್ದು, ನಕಲಿ ನೋಟು ಪ್ರಿಂಟ್ ಮಾಡಲು ಬೇಕಾದ ಹೊಸ ಪ್ರಿಂಟರ್ಸ್, ಕೆಮಿಕಲ್ಸ್ ಮತ್ತು ಇತರೆ ಪದಾರ್ಥಗಳನ್ನು ಕೊಂಡು ತಂದಿದ್ದಾರೆ.
ಶೆಡ್ನಲ್ಲಿ ವಾಸಿಸುತ್ತಿದ್ದ ಆರೋಪಿಗಳು ನಂತರ ಕಾಳಿಮಂದಿರ ಬಳಿ ಇರುವ ಅಪಾರ್ಟ್ಮೆಂಟ್ನ ಫ್ಲ್ಯಾಟ್ ಒಂದನ್ನು ಬಾಡಿಗೆ ಪಡೆದಿದ್ದರು. ಆರೋಪಿಗಳು 100, 200 ಮತ್ತು 500 ರೂ. ನೋಟುಗಳನ್ನು ಮುದ್ರಿಸಿ, ಅವುಗಳನ್ನು ದೆಹಲಿ, ಗುಜರಾತ್, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ಮುಂತಾದ ಕಡೆ ಚಲಾವಣೆ ಮಾಡುತ್ತಿದ್ದರು.