ಸಂಬಂಧದಲ್ಲಿ ಸೋದರ ಮಾವನಾಗಬೇಕಿದ್ದವನ ಜೊತೆ ಅಕ್ರಮ ಸಂಬಂಧ ಹೊಂದಿದ್ದರಿಂದಾಗಿ ಗಂಡನನ್ನೇ ಪತ್ನಿಯೊಬ್ಬಳು ಕೊಲೆ ಮಾಡಿದ್ದಾಳೆ.
ಪತಿಯನ್ನು ಕೊಲೆಮಾಡಲು ಪ್ರಿಯತಮೆಗೆ ಸೋದರ ಮಾವ ಸಾಥ್ ನೀಡಿದ್ದಾನೆ.
ಆಗ್ರಾದ ಖಂಡಾ ಪ್ರದೇಶದಲ್ಲಿ ಘಟನೆ ನಡೆದಿದ್ದು, ವಿಕ್ರಮ್ ಠಾಕೂರ (23) ಕೊಲೆಯಾದ ಪತಿಯಾಗಿದ್ದಾನೆ. ಈತನ ಪತ್ನಿ ರವೀನಾ ಹಾಗೂ ಪ್ರಿಯಕರ ಪ್ರತಾಪ್ ಸೇರಿಕೊಂಡು ವಿಕ್ರಮ್ ನನ್ನು ಕೊಲೆ ಮಾಡಿದ್ದಾರೆ.
ಪೊಲೀಸರು ಪಾಪಿ ಪತ್ನಿ ರವೀನಾಳನ್ನು ವಶಕ್ಕೆ ಪಡೆದುಕೊಂಡಿದ್ದು, ಈಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪ್ರತಾಪ್ ಪರಾರಿಯಾಗಿದ್ದಾನೆ.