Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಯುವತಿಯೊಬ್ಬಳ ಜೊತೆ ಕರ್ತವ್ಯ ನಿರತನಲ್ಲದ ಪೈಲಟ್ವೊಬ್ಬರು ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನಿಂದ ಪುಣೆಗೆ ಹೊರಟಿದ್ದ ಆಕಾಸ ಏರ್ಲೈನ್ಗೆ ಸೇರಿದ್ದ ವಿಮಾನದಲ್ಲಿ ನಡೆದಿದೆ.ಈ ಕುರಿತು ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿರುವ ಯುವತಿ, ತನ್ನನ್ನು ಬಲವಂತವಾಗಿ ವಿಮಾನದ ಕಡೆಯ ಸೀಟ್ಗೆ ಲಗೇಜ್ ಸಮೇತ ಕರೆದುಕೊಂಡು ಹೋಗಿ ಆಲ್ಕೋಹಾಲ್ ನೀಡಿ ಕಿರುಕುಳ ನೀಡಿದ್ದಾರೆ ಅಂತಾ ಬರೆದು ಕೊಂಡಿದ್ದಾಳೆ.