Publish Date: Sun, 06 Sep 2020 (13:43 IST)
Updated Date: Sun, 06 Sep 2020 (13:46 IST)
ದಾವಣಗೆರೆ : ಪ್ರೀತಿಸಿದ ಯುವತಿಗೆ ನಡುರಸ್ತೆಯಲ್ಲಿ ಯುವಕನೊಬ್ಬ ತಾಳಿ ಕಟ್ಟಿದ ಘಟನೆ ದಾವಣಗೆರೆ ಜಿಲ್ಲೆಯ ತಿಮ್ಲಾಪುರದಲ್ಲಿ ನಡೆದಿದೆ.
ಯುವಕ, ಯುವತಿ ಇಬ್ಬರು ಪ್ರೀತಿಸುತ್ತಿದ್ದರು. ಆದರೆ ಯುವಕನಿಗೆ ಈಗಾಗಲೇ ಸ್ವಜಾತಿಯ ಯುವತಿಯ ಜೊತೆ ಮದುವೆಯಾಗಿದ್ದ ವಿಚಾರ ತಿಳಿದ ಯುವತಿ ಆತನಿಂದ ದೂರವಾಗಿದ್ದಾಳೆ.
ಇದರಿಂದ ಕೋಪಗೊಂಡ ಆತ ನಡು ರಸ್ತೆಯಲ್ಲಿ ಯುವತಿಗೆ ತಾಳಿ ಕಟ್ಟಿ ಪ್ರೀತಿಸಿದ ಯುವತಿ ಜೊತೆ 2ನೇ ಮದುವೆಯಾಗಿದ್ದಾನೆ.ಈ ಹಿನ್ನಲೆಯಲ್ಲಿ ಗ್ರಾಮದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದೆ ಎನ್ನಲಾಗಿದೆ.