ಕರ್ನಾಟಕದ ಮರ್ಯಾದೆ ಹಾಳು ಮಾಡಿದ್ದೀರಿ: ಸಿದ್ಧರಾಮಯ್ಯ ಸರ್ಕಾರದ ವಿರುದ್ಧ ಸೋಮಣ್ಣ ವಾಗ್ದಾಳಿ

Sampriya
ಭಾನುವಾರ, 8 ಜೂನ್ 2025 (12:16 IST)
Photo Courtesy X
ಮೈಸೂರು: ಸಿದ್ದರಾಮಯ್ಯ ಸರ್ಕಾರವು ಆರ್‌ಸಿಬಿ ಗೆಲುವಿನ ಗಾಂಭೀರ್ಯತೆ ಅರ್ಥ ಮಾಡಿಕೊಳ್ಳದೇ ಕರ್ನಾಟಕದ ಮರ್ಯಾದೆ ಹಾಳು ಮಾಡಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ವಾಗ್ದಾಳಿ ನಡೆಸಿದರು. 

ರಾಜ್ಯದಲ್ಲಿರುವುದು ಹಳಿ ತಪ್ಪಿದ ಸರ್ಕಾರ. ಟ್ರ್ಯಾಕ್ ಇಲ್ಲದೆಯೇ ಓಡುತ್ತಿದೆ. ಅವರ ಒಳ ಒಪ್ಪಂದ ಹೇಗಿದೆಯೋ ಗೊತ್ತಿಲ್ಲ. ಜನರಲ್ಲಿ ನೋವು ತಂದಿದ್ದೀರಿ. ನಿಮ್ಮ ಪಾಪಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಿ ಎಂದು ಮೈಸೂರಿನಲ್ಲಿ ಹೇಳಿದರು.

ಬೆಂಗಳೂರು ಪೊಲೀಸ್‌ ಕಮಿಷನರ್‌ ಆಗಿದ್ದ ದಯಾನಂದ್ ದಕ್ಷ ಅಧಿಕಾರಿ. ಅಂತಹವರ ಅಮಾನತು ಸರಿಯಲ್ಲ. ನಿಮ್ಮ ಪಟಾಲಂ ಪಾಪಕ್ಕೆ ಅವರನ್ನು ಗುರಿ ಮಾಡಿರುವುದು ಮಹಾ ಅಪರಾಧ. ಪೊಲೀಸರು ನೈತಿಕತೆಯ ಮುಖವಾಗಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಬೆಲೆ ತೆತ್ತದಿದ್ದರೆ ಜನರೇ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು. 

ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಕೊಟ್ಟಷ್ಟು ಫ್ರೀ ಹ್ಯಾಂಡ್ ಇನ್ನೊಬ್ಬರಿಗೆ ಕೊಟ್ಟಿಲ್ಲ. ಅವರ ವಿವೇಕಕ್ಕೆ ಏನಾಗಿದೆಯೋ ಗೊತ್ತಿಲ್ಲ.  ಅಧಿಕಾರಕ್ಕೆ ಜೋತು ಬೀಳದೇ ನೈತಿಕತೆಯಿಂದ ಹೊಣೆ ಹೊರಬೇಕು ಎಂದು ಒತ್ತಾಯಿಸಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಹೇಶ್ ಶೆಟ್ಟಿ ದಕ ಜಿಲ್ಲೆಯಿಂದ ಗಡಿಪಾರು ಆದೇಶದಲ್ಲಿ ಮಹತ್ವದ ಬೆಳವಣಿಗೆ

ಯುಪಿಎ ಸರ್ಕಾರ ಮುಂಬೈ ದಾಳಿ ಬಳಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಬೇಕೆಂದಿತ್ತು, ಅಮೆರಿಕಾ ಬೇಡ ಎಂದಿತು: ಪಿ ಚಿದಂಬರಂ

ಜಾತಿಗಣತಿ ನೆಪ ಮಾತ್ರ ಹಿಂದೂಗಳನ್ನು ಒಡೆಯುವುದೇ ಕೆಲಸ: ಬಿವೈ ವಿಜಯೇಂದ್ರ

ಪಾಪ ಖರ್ಗೆ ಕುಟುಂಬಕ್ಕೆ ಸರ್ಕಾರ ಮೊದಲು ಪರಿಹಾರ ಕೊಡಲಿ: ಬಿವೈ ವಿಜಯೇಂದ್ರ

ಉಪವಾಸ ಮುಗಿದ ತಕ್ಷಣ ಏನನ್ನು ಸೇವಿಸಬೇಕು ಮತ್ತು ಸೇವಿಸಬಾರದು

ಮುಂದಿನ ಸುದ್ದಿ
Show comments