ಇದೇ ಮೊದಲ ಬಾರಿಗೆ ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳಾದ ಯಶವಂತರಾವ್ ಜಾದವ್ ಮತ್ತು ಎಸ್ ಎ ರವಿಂದ್ರನಾಥ್ ಪರ ಪ್ರಚಾರಕ್ಕೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯ ನಾಥ್ ಚಾಲನೆ ನೀಡಿದರು.
ನಗರದ ಬಸವೇಶ್ವರ ವೃತ್ತದಲ್ಲಿ ವೇದಿಕೆ ಸಮಾವೇಶವನ್ನುದ್ದೇಶಿಸಿ ಯುಪಿ ಸಿಎಂ ಮಾತನಾಡಿ. ರಾಜ್ಯದಲ್ಲಿ ಕಾಂಗ್ರಸ್ ಅಧಿಕಾರಕ್ಕೆ ಬಂದು ಐದು ವರ್ಷದಲ್ಲಿ ರೈತರ ನೆಮ್ಮದಿ ಕಸಿದುಕೊಂಡು ಭ್ರಷ್ಟಾಚಾರದಲ್ಲಿ ಮುಳುಗಿಹೋಗಿದೆ. ನನ್ನ ರಾಜ್ಯದಲ್ಲಿ ನಾನು ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ರೈತರ ಸಮಸ್ಯೆ ಬಗೆಹರಿಸಿದೆ. ಪ್ರತಿ ಕ್ಷೇತ್ರದಲ್ಲಿಯು ರೈತರು ನೆಮ್ಮದಿಯಿಂದ ಬಾಳುವಂತೆ ಮಾಡಿದೆ.
ಆದರೆ ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರ ಮಾಡುವುದನ್ನು ಬಿಟ್ಟರೆ ಮತ್ತೆನು ಅಭಿವೃದ್ಧಿಯ ಕೆಲಸ ಮಾಡಿಲ್ಲ ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ರೈತ ವಿರೋಧಿಯನ್ನು ಅನುಸರಿಸುತ್ತಿದೆ ಸಿದ್ದರಾಮಯ್ಯ ಸರ್ವಾಧಿಕಾರಿ ರೀತಿಯಲ್ಲಿ ರಾಜ್ಯವನ್ನು ಐದುವರ್ಷ ಲೂಟಿ ಮಾಡಿದ್ದಾರೆ ಇದನ್ನೆಲ್ಲ ತಡೆಯಲು ಬಿಜೆಪಿಗೆ ಬೆಂಬಲಿಸಬೇಕು ಅಂದ್ರು.
ಇನ್ನು ಐದು ವರ್ಷದ ಅವಧಿಯಲ್ಲಿ ಯಡಿಯ್ಯೂರಪ್ಪರ ನೇತೃತ್ವದಲ್ಲಿ ಅನೇಕ ಹೋರಾಟವಾಗಿದೆ. ಹೋರಾಟ ಮಾಡುತ್ತಲೇ ಇದ್ದೇವೆ. ಈ ಬಾರಿ ರಾಜ್ಯದಲ್ಲಿ ಕಮಲ ಅರಳಲಿದ್ದು ಯಡಿಯ್ಯೂರಪ್ಪ ಸಿಎಂ ಆಗುವುದು ನಿಶ್ಚಿತ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.