ಬಾಯಲ್ಲಿ ನೀರೂರಿಸುವ ಕೊಂಕನ್ ಗುಲಕಂದ್, ತಹರೆವಾರಿ ದೋಸೆ, ಉತ್ತರ ಕರ್ನಾಟಕದ ಕಡಕ್ ರೊಟ್ಟಿ, ಸೇಂಗಾ ಚಟ್ನಿ, ಎಣ್ಣೆಗಾಯಿ ಪಲ್ಯ ಅಬ್ಬಾ ಒಂದೇ ಎರಡೇ ಬಾಯಲ್ಲಿ ನೀರೂರಿಸುವ ನೂರಾರು ತಹರೆವಾರಿ ಆಹಾರ ಪದಾರ್ಥಗಳು, ಮನರಂಜನೆಗೆ ಸಂಗೀತ...ಇದೆಲ್ಲ ಕಂಡುಬಂದಿದ್ದು ಯಲಹಂಕಾದಲ್ಲಿ ನಡೆಯುತ್ತಿರುವ ಮೂರು ದಿನಗಳ ಸ್ವದೇಶಿ ಆಹಾರ ಮೇಳದಲ್ಲಿ.
ಇಂದು ಸಂಜೆ ನಡೆದ ಆಹಾರ ಮೇಳಕ್ಕೆ ಯಲಹಂಕ ಶಾಸಕರಾದ ಎಸ್.ಆರ್. ವಿಶ್ವನಾಥ್ ಚಾಲನೆ ನೀಡಿದ್ರು...ಈ ಸ್ವದೇಶಿ ಆಹಾರ ಮೇಳದಲ್ಲಿ ಬೆಂಗಳೂರು ಮಾತ್ರವಲ್ಲದೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ವರ್ತಕರು ಬೆಂಗಳೂರಿಗರ ಬಾಯಿ ಚಪಲವನ್ನು ತಮ್ಮ ಕೈ ರುಚಿಗಳ ಮೂಲಕ ತೀರಿಸಿದ್ರು.
ಇನ್ನು ಎರಡು ದಿನಗಳ ಕಾಲ ನಡೆಯುವ ಈ ಆಹಾರ ಮೇಳದಲ್ಲಿ ಕೇವಲ ಆಹಾರ ಮಾತ್ರವಲ್ಲದೆ, ವಸ್ತ್ರಾಲಂಕಾರಗಳು, ಗ್ರಹಾಪಯೋಗಿ ಪೀಠೋಪಕರಣಗಳು, ಮನರಂಜನೆ ಕಾರ್ಯಕ್ರಮಗಳು ವಾರಾಂತ್ಯದಲ್ಲಿ ಬೆಂಗಳೂರಿಗಳ ಮನಸೆಳೆಯುತ್ತಿದೆ.