Publish Date: Sat, 20 Apr 2019 (06:45 IST)
Updated Date: Sat, 20 Apr 2019 (06:47 IST)
ಬೆಂಗಳೂರು: ಒಟ್ಟಾರೆ ಸ್ಪರ್ಧೆ ಮಾಡ್ತಿರೋದು ಏಳು ಲೋಕಸಭಾ ಕ್ಷೇತ್ರದಲ್ಲಿ. ಅಷ್ಟಕ್ಕೇ ಪ್ರಧಾನಿಯಾಗುವ ಕನಸು ಕಾಣ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರಿಗೆ ಟಾಂಗ್ ಕೊಟ್ಟಿದ್ದಾರೆ.
ರಾಹುಲ್ ಗಾಂಧಿ ಪ್ರಧಾನಿ ಆದರೆ ಅವರ ಪಕ್ಕದಲ್ಲೇ ನಿಂತು ಸಲಹೆಗಾರನಾಗಿ ಕೆಲಸ ಮಾಡುವೆ ಎಂದು ದೇವೇಗೌಡರು ಹೇಳಿಕೆ ನೀಡಿದ ಬೆನ್ನಲ್ಲೇ ಯಡಿಯೂರಪ್ಪ ಈ ರೀತಿ ವ್ಯಂಗ್ಯ ಮಾಡಿದ್ದಾರೆ.
‘ಏಳು ಸೀಟಿನಲ್ಲಿ ಸ್ಪರ್ಧಿಸುತ್ತಿರುವ ಒಂದು ಪಕ್ಷದ ನಾಯಕರು ಪ್ರಧಾನಿಯಾಗುವ ಅಥವಾ ಪ್ರಧಾನಿಗೆ ಸಲಹೆಗಾರನಾಗುವ ಕನಸು ಕಾಣಸಲು ಹೇಗೆ ಸಾಧ‍್ಯ? ಒಬ್ಬ ವ್ಯಕ್ತಿ ಇಷ್ಟೊಂದು ಮಹತ್ವಾಕಾಂಕ್ಷೆ ಇಟ್ಟುಕೊಳ್ಳಲು ಹೇಗೆ ಸಾಧ್ಯ?’ ಎಂದು ಮಾಧ್ಯಮದ ಎದುರು ಯಡಿಯೂರಪ್ಪ ಲೇವಡಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ