Publish Date: Sat, 28 May 2022 (09:09 IST)
Updated Date: Sat, 28 May 2022 (10:13 IST)
ಬೆಂಗಳೂರು : ವಿಜಯೇಂದ್ರಗೆ ಪರಿಷತ್ ಟಿಕೆಟ್ ಕೈತಪ್ಪಿದ ನಂತರ ಯಡಿಯೂರಪ್ಪ ಮೌನ ವಹಿಸಿರುವುದು ಬಿಜೆಪಿಯನ್ನು ಕಂಗೆಡಿಸಿದೆ.
ಗುರುವಾರ ಬೆಳಗಾವಿ ಕಾರ್ಯಕ್ರಮಕ್ಕೆ ಗೈರಾಗಿದ್ದ ಬಿಎಸ್ವೈ, ಮುಂದಿನ 10 ದಿನ ವಿಶ್ರಾಂತಿಯಲ್ಲಿ ಇರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಇದು ಪರಿಷತ್ ಚುನಾವಣಾ ಪ್ರಚಾರದ ಮೇಲೆ ಪ್ರಭಾವ ಬೀರುವ ಸಂಭವ ಇದೆ ಅಂತಾ ಹೇಳಲಾಗ್ತಿದೆ. ಅತ್ತ ಬೆಳಗಾವಿ ಬಿಜೆಪಿಯಲ್ಲಿ ಬಣ ಜಗಳ ಜೋರಾಗಿದೆ. ಎಂಎಲ್ಸಿ ಲಖನ್ ಜಾರಕಿಹೊಳಿ ಬಿಜೆಪಿ ಬೆಂಬಲಿಸಲು ಸಿದ್ಧರಿದ್ದರೂ, ನಮಗೆ ಅವರ ಬೆಂಬಲ ಬೇಕಿಲ್ಲ ಎಂದು ಸಚಿವ ಉಮೇಶ್ ಕತ್ತಿ ಬಹಿರಂಗವಾಗಿ ಘೋಷಿಸಿದ್ದಾರೆ.