Publish Date: Sun, 10 Feb 2019 (14:30 IST)
Updated Date: Sun, 10 Feb 2019 (14:33 IST)
ಯಡಿಯೂರಪ್ಪ ಮುಗ್ಧ. ಕುತಂತ್ರ ಗೊತ್ತಿಲ್ಲದವರು. ಕುರ್ಚಿ ಉಳಿಸಿಕೊಳ್ಳಲು ಸಿಎಂ ಈ ರೀತಿ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಶಾಸಕ ಆರೋಪ ಮಾಡಿದ್ದಾರೆ.
ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸದಾ ಕಾಲ ಐಷಾರಾಮಿ ಜೀವನ ನಡೆಸುತ್ತಾರೆ. ಈಗ ನಕಲಿ ಆಡಿಯೋ ಬಿಡುಗಡೆ ಮಾಡಿದ್ದಾರೆ. ಇದು ಜನರಲ್ಲಿ ಅಸಹ್ಯ ಭಾವನೆ ಹುಟ್ಟಿಸಿದೆ ಎಂದು ಶಾಸಕ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಮುಗ್ಧ. ಕುತಂತ್ರ ಗೊತ್ತಿಲ್ಲದವರು. ಕುರ್ಚಿ ಉಳಿಸಿಕೊಳ್ಳಲು ಸಿಎಂ ಈ ರೀತಿ ಮಾಡಿದ್ದಾರೆ. ಆಡಿಯೋ ಬಿಡುಗಡೆ ಮಾಡುವಾಗ ನಾನೇ ಮಾಡಿಸಿದ್ದು ಅಂತಾರೆ. ಧರ್ಮಸ್ಥಳಕ್ಕೆ ಹೋದಾಗ ಅದು ಯಡಿಯೂರಪ್ಪ ಅವರದ್ದು ಅಂತಾ ನಾನು ಹೇಳಿಲ್ಲ ಅಂತಾರೆ.
ರಾಜ್ಯದ ಬಜೆಟ್ ಮಂಡಿಸುವಾಗ ಆಡಿಯೋ ಬಿಡುಗಡೆ ಮಾಡೋದು ಮುಖ್ಯನಾ? ಬಜೆಟ್‌ಗಿಂತ ಆಡಿಯೋ ಮುಖ್ಯ ಆಯ್ತಾ? ಡಬ್ಬಿಂಗ್, ಮಿಕ್ಸಿಂಗ್, ಮಿಮಿಕ್ರಿ ಮಾಡೋದ್ರಲ್ಲಿ ಸಿಎಂ ನಿಸ್ಸೀಮರು. ಅವರು ಸ್ವತಃ ಸಿನಿಮಾ ನಿರ್ಮಾಪಕರು. ಪದೇ ಪದೇ ಅವರು ಸ್ಪೀಕರ್ ಹೆಸರು ಹೇಳ್ತಿದ್ದಾರೆ. ಆಡಿಯೋದಲ್ಲಿ ಇದ್ದಿದ್ದು ಬರೀ ಮಿಮಿಕ್ರಿ. ದೇವೇಗೌಡರ ಕುಟುಂಬದ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಎಂದು ಶ್ರೀರಾಮುಲು, ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ಸಿಎಂ ಕುಮಾರಸ್ವಾಮಿ ಜನರನ್ನು ದಿಕ್ಕು ತಪ್ಪಿಸ್ತಿದ್ದಾರೆ. ಪಂಚತಾರಾ ಹೋಟೆಲನ್ನೇ ಮನೆ ಮಾಡಿಕೊಂಡಿದ್ದಾರೆ. ಇದರ ಬಿಲ್ಲನ್ನು ಲೋಕೋಪಯೋಗಿ ಗುತ್ತಿಗೆದಾರರು ಕಟ್ಟುತ್ತಿದ್ದಾರೆ. ಇಂಥವರಿಂದ ಬಡವರು ಹಾಗೂ ಸಾಮಾನ್ಯರ ಅಭಿವೃದ್ಧಿ ಸಾಧ್ಯವಿಲ್ಲ. ನಾನು ಕ್ಲರ್ಕ್ ಅಂತಾ ಹೇಳ್ತಾರೆ. 35 ಸೀಟು ಗೆದ್ದು ಕ್ಲರ್ಕ್ ಆಗಿಯೇ ಇರಬೇಕು, ಡಿಸಿ ಆಗೋಕೆ ಆಗಲ್ಲ. ಮೊನ್ನೆ ಮಂಡಿಸಿದ ಬಜೆಟ್ ಕೇವಲ ಐದಾರು ಜಿಲ್ಲೆಗೆ ಮೀಸಲಾಗಿದೆ ಎಂದರು.
Jagadeesh
Publish Date: Sun, 10 Feb 2019 (14:30 IST)
Updated Date: Sun, 10 Feb 2019 (14:33 IST)