Publish Date: Wed, 22 Jul 2020 (21:57 IST)
Updated Date: Wed, 22 Jul 2020 (21:59 IST)
ಹಳ್ಳಿಹಕ್ಕಿ ಖ್ಯಾತಿಯ ಮಾಜಿ ಸಚಿವ ಹೆಚ್.ವಿಶ್ವನಾಥ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಹಾಡಿ ಹೊಗಳತೊಡಗಿದ್ದಾರೆ.
ವಿಧಾನ ಪರಿಷತ್ ಗೆ ನಾಮ ನಿರ್ದೇಶನ ಮಾಡಿ ಸರಕಾರ ಆದೇಶ ಹೊರಡಿಸಿದ್ದರಿಂದಾಗಿ ಫುಲ್ ಖುಷ್ ಆಗಿರುವ ಹಳ್ಳಿಹಕ್ಕಿ, ಯಡಿಯೂರಪ್ಪ ಮಾತಿಗೆ ತಪ್ಪದ ಮಗ ಅಂತೆಲ್ಲಾ ವರ್ಣಿಸಿದ್ದಾರೆ.
ನಾಮ ನಿರ್ದೇಶನ ಮಾಡಿ ಮತ್ತೊಂದು ಅವಕಾಶ ನೀಡಿದ್ದಕ್ಕೆ ಹೈಕಮಾಂಡ್, ರಾಜ್ಯದ ನಾಯಕರಿಗೆ ಅಭಿನಂದನೆ ಸಲ್ಲಿಸೋದಾಗಿ ಹೆಚ್.ವಿಶ್ವನಾಥ್ ಹೇಳಿದ್ದಾರೆ.