Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಎಂದು ಸದನದಲ್ಲಿ ಯತ್ನಾಳ್‌ ಆರ್ಭಟ

 ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌

geetha

bangalore , ಬುಧವಾರ, 28 ಫೆಬ್ರವರಿ 2024 (19:40 IST)
ಬೆಂಗಳೂರು : ಬುಧವಾರ ಸದನದಲ್ಲಿ  ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮಾತನಾಡಿ, ಪಾಕಿಸ್ತಾನದ ಪರ ಘೋಷಣೆ ಕೂಗಿದರು  ಸದನದಲ್ಲಿ ಆಕ್ಷೇಪಾರ್ಹ ಪದಗಳೊಂದಿಗೆ ಆರ್ಭಟಿಸಿದರು. ಕಾಂಗ್ರೆಸ್‌ ಸದಸ್ಯರ ಆಕ್ಷೇಪದ ನಡುವೆಯೂ ತಮ್ಮ ಪದಬಳಕೆಯನ್ನು ಸಮರ್ಥಿಸಿಕೊಂಡ ಬಸನಗೌಡ ಪಾಟೀಲ್‌ ಯತ್ನಾಳ್‌, ಹೌದು ಈ ದೇಶದ ಅನ್ನ ತಿಂದು ಇಲ್ಲಿಗೆ ದ್ರೋಹ ಬಗೆಯುವವರು ನಿಜಕ್ಕೂ ತಾ*ಗಂಡರು ಎಂದು ತಮ್ಮ ವಾಕ್ಯವನ್ನು ಪುನರುಚ್ಛರಿಸಿದರು.ರಾಜ್ಯಸಭಾ ಚುನಾವಣೆಯ ಬಳಿಕ ಕಾಂಗ್ರೆಸ್‌ ಅಭ್ಯರ್ಥಿ ನಾಸಿರ್‌ ಹುಸೇನ್‌ ರ ವಿಜಯೋತ್ಸವದ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆನ್ನಲಾದ ಪ್ರಕರಣವು ಬುಧವಾರ ಸದನದಲ್ಲಿ ಭಾರೀ ಗದ್ದಲ ನಡೆಯಲು ಕಾರಣವಾಯಿತು. 

ಇದಕ್ಕೂ ಮುನ್ನ ಮಾತನಾಡಿದ ಶಾಸಕ ಸುನಿಲ್‌ ಕುಮಾರ್‌ ಕಾರ್ಕಳ, ಈ ದೇಶ ವಿಭಜನೆಯಾಗಿರುವುದೇ ಧರ್ಮಾಧಾರಿತವಾಗಿದೆ. ಘಟನೆ ನಡೆದೇ ಇಲ್ಲ ಎಂದು ಕೆಲವು ಶಾಸಕರು ಸಮರ್ಥಿಸಿಕೊಳ್ಳುತ್ತಿದ್ದರೆ, ಇನ್ನೂ ಕೆಲವರು ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದಿದ್ದಾರೆ. ಪರೋಕ್ಷವಾಗಿ ಈ ಬಗ್ಗೆ ಕಾಂಗ್ರೆಸ್‌ ಶಾಸಕರಲ್ಲೇ ಗೊಂದಲವಿದ್ದು, ಆರೋಪಿಯನ್ನು ರಕ್ಷಿಸಲು ಯತ್ನಿಸಲಾಗುತ್ತಿದೆ. ಹೀಗಾಗಿ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. 
 
ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಇದೊಂದು ದೇಶದ ಹಿತರಕ್ಷಣೆಯ ದೃಷ್ಟಿಯಿಂದ ಗಂಭೀರ ಪ್ರಕರಣವಾಗಿದೆ. ಈ ಹಿಂದೆಯೂ ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟದ ಆರೋಪಿ ಸಿಕ್ಕಿಬಿದ್ದಿದ್ದಾಗ ಕಾಂಗ್ರೆಸ್‌ ಇದೇ ರೀತಿ ವರ್ತಿಸಿತ್ತು ಎಂದು ಆರೋಪಿಸಿದರು. 
 
ಬಸನಗೌಡ ಪಾಟೀಲ್‌ ಯತ್ನಾಳ್‌, ಅಂಬೇಡ್ಕರ್‌ ಅವರ ಪುಸ್ತಕದ ಸಾಲುಗಳನ್ನು ಉಲ್ಲೇಖಿಸಿ ಮಾತನಾಡಿ, ಮುಸ್ಲಿಮರು ಯಾವತ್ತೂ ದೇಶದ ಪರವಾಗಿರಲು ಸಾಧ್ಯವಿಲ್ಲ. ಧರ್ಮದ ಪರವಾಗಿ ಇರುತ್ತಾರೆ. ಹೀಗಾಗಿ ಧರ್ಮಾಧಾರಿತವಾಗಿ ದೇಶ ವಿಭಜನೆಯಾದರೆ ಇಲ್ಲಿರುವ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳಿಸಿ ಅಲ್ಲಿರುವ ಹಿಂದೂಗಳನ್ನು ಭಾರತಕ್ಕೆ ಕರೆಸಿಕೊಳ್ಳಬೇಕೆಂದು ಬಾಬಾಸಾಹೇಬರೇ ಹೇಳಿದ್ದಾರೆ ಎಂದರು. ಒಟ್ಟಾರೆ, ಬುಧವಾರದ ಅಧಿವೇಶನದ ಕಲಾಪದ ಸಮಯ ಸಂಪೂರ್ಣವಾಗಿ ಪಾಕ್‌ ಪರ ಘೋಷಣೆ ವಿವಾದಕ್ಕೆ ಮೀಸಲಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನ ಪರ ಘೋಷಣೆಯ ಕೋಲಾಹಲಕ್ಕೆ ಸಾಕ್ಷಿಯಾಯ್ತು ಕಲಾಪ