ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಅಲಂಗಾರಿನಲ್ಲಿ ಸೋಮವಾರ ರಾತ್ರಿ ನಡೆದ ಯಕ್ಷಗಾನದ ವೇಳೆ ಕಲಾವಿದರೊಬ್ಬರು ಕುಸಿದು ಬಿದ್ದ ಘಟನೆ ನಡೆದಿದೆ.
ಅಲಂಗಾರು ಶ್ರೀಮಹಾಲೀಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಕರ್ಣಪರ್ವ ಪ್ರಸಂಗದಲ್ಲಿ ಖ್ಯಾತ ಕಲಾವಿದ ಮೋಹನ ಅಮ್ಮುಂಜೆ ಎಂಬುವವರು ಪಾತ್ರಧಾರಿಯಾಗಿದ್ದರು.
ಈ ಸಂದರ್ಭ ಅತೀವ ಬಳಲಿಕೆಯಿಂದ ಅವರು ರಂಗಸ್ಥಳದಲ್ಲಿ ಕುಸಿದು ಬಿದ್ದಿದ್ದರು. ಹೀಗಾಗಿ 15 ನಿಮಿಷಗಳ ಕಾಲ ಯಕ್ಷಗಾನವನ್ನು ಸ್ಥಗಿತಗೊಳಿಸಲಾಯಿತು. ಅಮ್ಮುಂಜೆ ಅವರು ಚೇತರಿಸಿಕೊಂಡ ಬಳಿಕ ಮತ್ತೆ ಅವರು ತಮ್ಮ ಪಾತ್ರವನ್ನು ಮುಂದುವರಿಸಿದರು.