ಬೆಂಗಳೂರು: ತನಗೆ ಸರ್ಕಾರ ನೀಡುವ ಕೆಂಪು ದೀಪದ ಕಾರನ್ನೇ ಬಳಸುವುದಿಲ್ಲ ಎಂದು ರಾಜ್ಯ ಸಚಿವ ಯುಟಿ ಖಾದರ್ ಹೇಳಿದ್ದಾರೆ.
ನಿನ್ನೆಯಷ್ಟೇ ಕೆಂಪು ದೀಪ ನನ್ನ ತಲೆ ಮೇಲಿದ್ಯಾ? ತಲೆ ಮೇಲಿದ್ರೆ ತೆಗೆದು ಬಿಡ್ತಾ ಇದ್ದೆ ಎಂದಿದ್ದ ಖಾದರ್ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇಂದು ವಿವಾದ ಸ್ವರೂಪ ಪಡೆಯುತ್ತಿದ್ದಂತೆ ಖಾದರ್ ಈ ಹೇಳಿಕೆ ನೀಡಿದ್ದಾರೆ.
ಪ್ರಧಾನಿ ಮೋದಿ ದೇಶದಲ್ಲಿ ವಿಐಪಿ ಸಂಸ್ಕೃತಿ ನಿಲ್ಲಿಸಬೇಕೆಂಬ ಉದ್ದೇಶದಿಂದ ಯಾರೂ ಕೆಂಪು ದೀಪ ಬಳಸಬಾರದು ಎಂದು ಹೊಸ ಪದ್ಧತಿಗೆ ನಿನ್ನೆಯಿಂದ ಚಾಲನೆ ನೀಡಿದ್ದರು. ಇದಕ್ಕೆ ಸಿಎಂ ಸಿದ್ಧರಾಮಯ್ಯ ವಿರೋಧ ವ್ಯಕ್ತಪಡಿಸಿದ್ದರು.
ಅದರ ಬೆನ್ನಲ್ಲೇ ಸಚಿವ ಖಾದರ್ ಕೂಡಾ ಕೆಂಪು ದೀಪ ತೆಗೆಯಲ್ಲ ಎಂದಿದ್ದರು. ಇದು ಚರ್ಚೆಗೆ ಕಾರಣವಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ