ನವದೆಹಲಿ: ಭಾರತೀಯ ಸೇನೆಯ ಇಬ್ಬರು ಯೋಧರ ಶಿರಚ್ಛೇದ ಮಾಡಿದ ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಡಲು ಭಾರತ ಸೇನೆಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಇದರೊಂದಿಗೆ ಮತ್ತೊಮ್ಮೆ ಭಾರತ ಸೇನೆಗೆ ರಕ್ಷಣಾ ಸಚಿವ ಅರುಣ್ ಜೇಟ್ಲಿ ಪರಮಾಧಿಕಾರ ನೀಡಿದ್ದಾರೆ.
ನಿನ್ನೆಯಷ್ಟೇ ಭಾರತ ಗಡಿಯೊಳಕ್ಕೆ ನುಗ್ಗಿದ ಪಾಕ್ ಸೇನೆ ಅಪ್ರಚೋದಿತ ದಾಳಿ ನಡೆಸಿದ್ದಲ್ಲದೆ, ಇಬ್ಬರು ಸೈನಿಕರನ್ನು ಹತ್ಯೆ ಮಾಡಿ ಶಿರಚ್ಛೇದ ಮಾಡಿ ಕ್ರೌರ್ಯ ಮೆರೆದಿತ್ತು. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಅರುಣ್ ಜೇಟ್ಲಿ ನಿನ್ನೆಯೇ ಘೋಷಿಸಿದ್ದರು.
ಅದರಂತೆ ಸೇನೆಗೆ ಪಾಕ್ ಸೇನೆಗೆ ಪಾಠ ಕಲಿಸಲು ಅಧಿಕಾರ ನೀಡಲಾಗಿದೆ. ಈ ನಡುವೆ ಇಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಪ್ರಧಾನಿ ಮೋದಿಗೆ ಘಟನೆಯ ವಿವರ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಪಾ್ಕ ಗೆ ಪಾಠ ಕಲಿಸುವ ಬಗ್ಗೆ ಮತ್ತಷ್ಟು ಚರ್ಚೆಗಳು ನಡೆಯಲಿವೆ.
ಇದರೊಂದಿಗೆ ಮತ್ತೊಮ್ಮೆ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಮತ್ತೊಂದು ಸರ್ಜಿಕಲ್ ದಾಳಿ ನಡೆದರೂ ಅಚ್ಚರಿಯಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ