Publish Date: Mon, 12 Sep 2022 (16:09 IST)
Updated Date: Mon, 12 Sep 2022 (16:11 IST)
ವಿಮಾನ ಪ್ರಯಾಣಿಸುತ್ತಿರುವಾಗ ಮೃತಪಟ್ಟ ಮಹಿಳೆ ಹೃದಯವಿದ್ರಾವಕ ಘಟನೆ ...!!!!
ದುಬೈನಿಂದ ಬಂದ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಪ್ರಜ್ಞಾಹೀನಳಾಗಿ, ಮೃತಪಟ್ಟ ಘಟನೆ ಕೊಚ್ಚಿಯಲ್ಲಿ ನಡೆದಿದೆ.
56 ವರ್ಷದ ಮಿನಿ ಎಂಬುವವರು ದುಬೈನಿಂದ ವಿಮಾನದ ಮೂಲಕ ಕೊಚ್ಚಿಗೆ ಹೋಗುತ್ತಿದ್ದರು. ಆ ವೇಳೆ ವಿಮಾನದಲ್ಲಿಯೇ ಮಿನಿ ಪ್ರಜ್ಞಾಹೀನರಾಗಿದ್ದಾರೆ.
ವಿಮಾನ ಲ್ಯಾಂಡ್ ಆದ ತಕ್ಷಣವೇ ಆಕೆಯನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಾಗಲೇ ಮಿನಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಮೃತ ಮಿನಿ ಆಕೆ ಕೆಲವು ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಇದರಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಈ ಬಗ್ಗೆ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಕೊಳ್ಳದ, ಸಹಜ ಸಾವು ಎಂದೇ ಪರಿಗಣಿಸಿದ್ದಾರೆ.