Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಆಪ್ ಮೂಲಕ ವಿದೇಶೀ ಮಹಿಳೆಯನ್ನು ಮುಂದಿಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ರಾಮಮೂರ್ತಿ ನಗರದಲ್ಲಿ ಮನೆಯೊಂದರಲ್ಲಿ ವಿದೇಶೀ ಮಹಿಳೆಗೆ ಹಣದ ಅಮಿಷವೊಡ್ಡಿ ವೇಶ್ಯಾವಾಟಿಕೆ ನಡೆಯುತ್ತಿತ್ತು. ಆಪ್ ಗಳ ಮೂಲಕ ಗಿರಾಕಿಗಳನ್ನು ಸೆಳೆಯಲಾಗುತ್ತಿತ್ತು.
ಈ ಮನೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಇಬ್ಬರು ಉಗಾಂಡ ಮೂಲದ ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಜಾಲದ ರೂವಾರಿಯನ್ನೂ ಬಂಧಿಸಲಾಗಿದೆ.