Publish Date: Sun, 07 Aug 2022 (10:20 IST)
Updated Date: Sun, 07 Aug 2022 (10:27 IST)
ಕಲಬುರಗಿ: ಅಕ್ರಮ ಸಂಬಂಧಕ್ಕಾಗಿ 12 ವರ್ಷ ಜೊತೆಯಲ್ಲೇ ಸಂಸಾರ ಮಾಡಿದ ಗಂಡನನ್ನೇ ಮಹಿಳೆ ಕೊಲೆ ಮಾಡಿದ್ದಾಳೆ.
ಮಕ್ಕಳ ಕಣ್ಣೆದುರೇ ಗಂಡನನ್ನು ಮಹಿಳೆ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ರಾತ್ರಿ ಮೂತ್ರ ವಿಸರ್ಜನೆ ಮಾಡಿ ಪತಿ ಮನೆಯೊಳಗೆ ಬಂದಾಗ ಪ್ರಿಯಕರನೂ ಜೊತೆಗೇ ಬಂದು ಗಲಾಟೆ ಮಾಡಿದ್ದ. ಈ ವೇಳೆ ಪತ್ನಿಯೇ ಪತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.
ನಡುವೆ ಬಂದ ಮಕ್ಕಳನ್ನು ಕೋಣೆಯಲ್ಲಿ ಕೂಡಿಹಾಕಿದ್ದಾರೆ. ಶವ ಸಾಗಾಟ ಮಾಡುವಾಗ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.