Publish Date: Sat, 26 Mar 2022 (17:52 IST)
Updated Date: Sat, 26 Mar 2022 (17:54 IST)
ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಮಹಿಳೆಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.
ವಿನಯ ಕುಮಾರಿ (44) ಮೃತ ಮಹಿಳೆ.
ಪ್ರತಿದಿನದಂತೆ ಶನಿವಾರವೂ ವಿನಯ ಕುಮಾರಿ ಮಲ್ಲೇಶಪಾಳ್ಯನಲ್ಲಿರುವ ಜಿಮ್ ಸೆಂಟರ್ ಗೆ ತೆರಳಿದ್ದಾರೆ.
ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನ ಪಟ್ಟರೂ, ಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ.
ಮೃತ ವಿನಯ ಕುಮಾರಿ ಮೂಲತ ಮಂಗಳೂರು ನಿವಾಸಿಯಾಗಿದ್ದು, ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಲ್ಲೇಶಪಾಳ್ಯದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.
geetha
Publish Date: Sat, 26 Mar 2022 (17:52 IST)
Updated Date: Sat, 26 Mar 2022 (17:54 IST)