ಲಾಕ್ ಡೌನ್ ನಿಂದಾಗಿ ಕೆಲವು ರೈತರು ತಮ್ಮ ಜಮೀನಿನಲ್ಲಿದ್ದ ಫಸಲನ್ನು ಹಾಳು ಮಾಡಿಕೊಂಡಿದ್ದಾರೆ. ಬೆಳೆ ನಾಶ ಮಾಡಿಕೊಂಡಿದ್ದಾರೆ.
ಇಂಥಹ ರೈತರಿಗೆ ಪರಿಹಾರ ಕೊಡಲು ಸಾಧ್ಯವಿಲ್ಲ ಎಂದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಲವಾರು ಕಡೆ ರೈತರು ಬೆಳೆದ ಬೆಳಯನ್ನು ಸ್ವತಃ ತಾವೇ ನಾಶ ಪಡಿಸಿದ್ದಾರೆ. ಇದಕ್ಕೆ ಸರ್ಕಾರ ಹೇಗೆ ಪರಿಹಾರ ಕೊಡಬೇಕು ?ಎಂದು ಪ್ರಶ್ನಿಸಿದರು. ರೈತರು ಯಾವುದೇ ಕಾರಣಕ್ಕೂ ಬೆಳೆ ನಾಶ ಮಾಡಬೇಡಿ ಎಂದು ಮನವಿ ಮಾಡಿದರು.
ದಾವಣಗೆರೆಯಲ್ಲಿ ಮೂರು ಕೊರೋನಾ ಪಾಸಿಟಿವ್ ಪ್ರಕರಣ ಇದ್ದು ಇದೀಗ ನೆಗೆಟೀವ್ ಬಂದಿದ್ದು, ದಾವಣಗೆರೆ ಗ್ರೀನ್ ಜೋನ್‌ಗೆ ಬರುವ ಸಾಧ್ಯತೆ ಇದೆ ಎಂದು ಪಾಟೀಲ್ ಸೂಚನೆ ಕೊಟ್ಟರು.