Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆರೆಂಜ್ ನಿಂದ ಈಗ ರೆಡ್ ಝೋನ್‍ : ಕೊರೊನಾ ಮತ್ತೆ 7 ಪಾಸಿಟಿವ್

ಆರೆಂಜ್ ನಿಂದ ಈಗ ರೆಡ್ ಝೋನ್‍ : ಕೊರೊನಾ ಮತ್ತೆ  7 ಪಾಸಿಟಿವ್
ಬಳ್ಳಾರಿ , ಶುಕ್ರವಾರ, 17 ಏಪ್ರಿಲ್ 2020 (14:55 IST)
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳದಿಂದಾಗಿ ಆರೆಂಜ್ ಝೋನ್ ನಲ್ಲಿದ್ದ ಈ ಜಿಲ್ಲೆ ಇದೀಗ ರೆಡ್ ಝೋನ್ ಗೆ ಬಂದಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಈ ವರೆಗೆ ಕೊರೊನಾ ಸೋಂಕಿತರ ಸಂಖ್ಯೆ ಆರರಿಂದ ಮೇಲಕ್ಕೇರದೆ ಆರೆಂಜ್ ಝೋನ್‍ನಲ್ಲಿದ್ದ ಗಣಿ ನಾಡು ಒಂದೇ ಕುಟುಂಬದ ಏಳು ಜನರಲ್ಲಿ ಕೊರೋನಾ ಸೋಂಕು ಕಂಡು ಬಂದಿರುವುದರಿಂದ ರೆಡ್ ಜೋನ್‍ಗೆ ತಳ್ಳಲ್ಪಟ್ಟಿದೆ. ಜಿಲ್ಲೆಯ ಹೊಸಪೇಟೆ ನಗರದ ಒಂದೇ ಕಟುಂಬದ ಏಳು ಜನರಲ್ಲಿ ಈ ಸೋಂಕು ಕಂಡು ಬಂದಿರುವುದರಿಂದ ಈಗ ಹೊಸಪೇಟೆ ನಗರ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿದೆ.

ಮಾರ್ಚ್ 5 ರಿಂದ 16 ವರೆಗೆ 11 ದಿನಗಳ ಕಾಲ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗದಿದ್ದರಿಂದ ಜಿಲ್ಲೆಯ ಜನತೆ ನಿಟ್ಟುಸಿರು ಬಿಟ್ಟಿದ್ದರು.  ಲಾಕ್‍ಡೌನ್ ಸಮಯದಲ್ಲಿ ಜನತೆ ಆದಷ್ಟು ಮನೆಯಲ್ಲಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಸೋಂಕು ಹರಡಂದಂತೆ ಇದ್ದುದರಿಂದ ಜಿಲ್ಲೆ ಆರೇಂಜ್ ಝೋನ್ ನಲ್ಲಿತ್ತು.

ಈಗ 14 ದಿನಗಳ ನಂತರ ಮೊದಲ ಬಾರಿಗೆ ಪಾಸಿಟಿವ್ ಕಾಣಿಸಿಕೊಂಡ ರೋಗಿ 52 ವರ್ಷದ ಗಂಡ ಮತ್ತು 48 ವರ್ಷದ ಹೆಂಡತಿ (ಪಿ-89 ಮತ್ತು 90) ಅವರ ಸಂಪರ್ಕಕ್ಕೆ ಬಂದಿದ ಸಂಬಂಧಿಕರ ಏಳು ಜನರಲ್ಲಿ ಕೊರೋನಾ ಪಾಸಿಟಿವ್  ಕಂಡು ಬಂದಿದೆ.

ಈಗ ಪಿ-90 ಅವರ 68 ವರ್ಷದ ತಾಯಿ,  50 ವರ್ಷದ ಅಣ್ಣ, 47 ವರ್ಷದ ತಂಗಿ, 39 ವರ್ಷದ ತಮ್ಮ, 11 ವರ್ಷದ ತಂಗಿಯ ಮಗಳು, ಮತ್ತೊಬ್ಬ ಸಹೋದರಿ ಮತ್ತು ಆಕೆಯ ಪತಿ ಅವರಿಗೆ ಈ ಸೋಂಕು ಕಾಣಿಸಿಕೊಂಡಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಈ ಜಿಲ್ಲೆಯಲ್ಲಿ ಕೊರೊನಾ ಪರೀಕ್ಷಾ ಕೇಂದ್ರ ಶುರು