ಸರ್ಕಾರದ ನಿಯಮವನ್ನು ಉಲ್ಲಂಘಿಸಿ ಜನರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಓಲಾ ಹಾಗೂ ಉಬರ್ ಪ್ರಯಾಣ ದರವನ್ನು ನಿಗದಿ ಮಾಡಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ 15 ದಿನಗಳ ಕಾಲಾವಕಾಶ ನೀಡಿ ಆದೇಶ ಹೊರಡಿಸಿದೆ. ಆದ್ರೆ ಕಾಟಾಚಾರಕ್ಕೆ ಸಭೆ ಮಾಡಿ ಸುಮ್ಮನಾಗಿರುವ ಸಾರಿಗೆ ಇಲಾಖೆ ಈ ವರೆಗೂ ದರ ನಿಗದಿ ಮಾಡಿಲ್ಲ. ಈಗಾಗಲೇ ಹೈಕೋರ್ಟ್ನ ಕಾಲಾವಕಾಶ ಮುಗಿಯುತ್ತಿದ್ದು ಹೈಕೋರ್ಟ್ ಮಧ್ಯ ಪ್ರವೇಶಿಸಿ ದರ ನಿಗದಿ ಮಾಡುತ್ತೆ ಎನ್ನಲಾಗುತ್ತಿದೆ. ನಾಳೆ ಹೈಕೋರ್ಟ್ನಲ್ಲೇ ಪ್ರಯಾಣದ ದರ ಫೈನಲ್ ಆಗುತ್ತಾ? ಎಂಬ ಪ್ರಶ್ನೆ ಎದ್ದಿದೆಸರ್ಕಾರ ನಿಗದಿ ಮಾಡಿದ್ದ ದರ ಹಾಗೂ ನಿಯಮವನ್ನು ಉಲ್ಲಂಘಿಸಿ ಸೇವೆ ನೀಡುತ್ತಿದ್ದ ಓಲಾ, ಉಬರ್, ಱಪಿಡೋ ಸೇವೆ ಬಂದ್ ಮಾಡಲು ಸರ್ಕಾರ ನಿರ್ಧರಿಸಿತ್ತು. ಬಳಿಕ ಹೈಕೋರ್ಟ್ ಮಧ್ಯ ಪ್ರವೇಶಿಸಿ ಆ್ಯಪ್ ಆಧರಿತ ಆಟೋ, ಕ್ಯಾಬ್ಗಳನ್ನು ಜನ ಹೆಚ್ಚಾಗಿ ಅವಲಂಬಿತರಾಗಿದ್ದಾರೆ. ಹೀಗಾಗಿ ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಓಲಾ, ಉಬರ್ ಕಂಪನಿಗಳ ಜೊತೆ ಸಭೆ ನಡೆಸಿ 15 ದಿನದೊಳಗೆ ಹೊಸ ದರ ನಿಗದಿಗೆ ಹೈಕೋರ್ಟ್ ಆದೇಶಿಸಿತ್ತು. ಆದ್ರೆ ಡೆಡ್ಲೈನ್ ಮುಗಿದರೂ ಸಾರಿಗೆ ಇಲಾಖೆ ಮಾತ್ರ ಇನ್ನೂ ದರ ಫಿಕ್ಸ್ ಮಾಡಿಲ್ಲ.