Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮಂಡ್ಯ : ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಕಹಳೆ ಊದಿ ದಳಪತಿಗಳಿಗೆ ಸೆಡ್ಡು ಹೊಡೆದಿದ್ದ ಸಂಸದೆ ಸುಮಲತಾ ಅಂಬರೀಶ್, ಇದೀಗ ಯಾವ ಪಕ್ಷ ಸೇರ್ಪಡೆ ಆಗುತ್ತಾರೆ ಎಂಬ ಪ್ರಶ್ನೆ ಎದ್ದಿದೆ.
ಜೊತೆಗೆ ಮುಂಬರುವ ಎಂಎಲ್ಎ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ಗಾಳಿ ಸುದ್ದಿಗಳು ಸಹ ಹರಿದಾಡುತ್ತಿವೆ. ಇದಕ್ಕೆ ಪುಷ್ಟಿ ನೀಡಲು ರೆಬೆಲ್ ಲೇಡಿ ಬೆಂಬಲಿಗರು ಮುಂದಾಗಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸಕ್ಕರೆನಾಡು ಮಂಡ್ಯ ಜಿಲ್ಲೆ ಅಕ್ಷರಶಃ ರಾಜಕೀಯ ರಣರಂಗವಾಗಿ ಬದಲಾಗಿತ್ತು. ಇಡೀ ಇಂಡಿಯಾದಲ್ಲಿ ಚುನಾವಣಾ ಕದನ ಇದ್ರು ಸಹ ಜನರ ಕಣ್ಣು ಮಾತ್ರ ಮಂಡ್ಯದ ಕಡೆ ಮೂಡಿತ್ತು. ಇದಕ್ಕೆ ಪ್ರಮುಖ ಕಾರಣ ಎಂದ್ರೆ ಸುಮಲತಾ ಅಂಬರೀಶ್ ಅವರು ಸ್ವಾಭಿಮಾನದ ಹೆಸರಲ್ಲಿ ಕಹಳೆಯ ಗುರುತಿಗೆ ಸ್ಪರ್ಧೆ ಮಾಡಿದ್ದ.
ಜೆಡಿಎಸ್ (ಎಆS) ಪಕ್ಷದಿಂದ ತೆನೆ ಹೊತ್ತ ರೈತ ಮಹಿಳೆಯ ಗುರುತಿನಿಂದ ಸ್ಪರ್ಧೆ ಮಾಡಿದ್ದ ನಿಖಿಲ್ ಕುಮಾರಸ್ವಾಮಿ. ಇವರಿಬ್ಬರ ಲೋಕಸಭಾ ಸಭಾ ಚುನಾವಣೆಯ ಕದನ ಮಂಡ್ಯ ರಾಜಕೀಯದ ಜೊತೆಗೆ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಸಂಚಲನವನ್ನು ಉಂಟುಮಾಡಿತು.