ಬೆಂಗಳೂರು: ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಅಥವಾ ಸ್ಪೆಲ್ಲಿಂಗ್ ನಲ್ಲಿ ಏನಾದರೂ ವ್ಯತ್ಯಾಸವಾಗಿದ್ದರೆ ಮುಂದೆ ತೊಂದರೆಯಾಗುತ್ತಾ? ಇದನ್ನು ಸರಿಪಡಿಸುವುದು ಹೇಗೆ ಎಂಬ ವಿವರ ಇಲ್ಲಿದೆ.
ಆಧಾರ್ ಕಾರ್ಡ್ ಎನ್ನುವುದು ಇತ್ತೀಚೆಗಿನ ದಿನಗಳಲ್ಲಿ ಎಲ್ಲಾ ಸರ್ಕಾರೀ ಯೋಜನೆಗಳಿಗೂ ಅಗತ್ಯವಾಗಿ ಬೇಕಾಗುವ ಗುರುತಿನ ಚೀಟಿಯಾಗಿದೆ. ದೇಶದ ಯಾವುದೇ ಮೂಲೆಗೆ ಹೋದರೂ ಉಪಯೋಗಕ್ಕೆ ಬರುವ ಆಧಾರ್ ಕಾರ್ಡ್ ನಲ್ಲಿ ನಮ್ಮ ಹೆಸರು, ವಿಳಾಸ ಸರಿಯಾಗಿರಬೇಕು. ತಪ್ಪಾಗಿದ್ದಲ್ಲಿ ನಿಮಗೆ ಸರ್ಕಾರೀ ದಾಖಲಾತಿಗಳನ್ನು ಮಾಡಿಸುವಾಗ ತೊಂದರೆಯಾದೀತು.
ಹೀಗಾಗಿ ಒಂದು ವೇಳೆ ಆಧಾರ್ ಕಾರ್ಡ್ ನಲ್ಲಿ ಹೆಸರು ತಪ್ಪಾಗಿ ಬಂದಿದ್ದರೆ ಅಥವಾ ನಿಮ್ಮ ವಿಳಾಸದಲ್ಲಿ ತಪ್ಪಾಗಿದ್ದರೆ ತಕ್ಷಣವೇ ಅದನ್ನು ಸರಿಪಡಿಸಿಕೊಳ್ಳಬೆಕು. ಒಂದು ವೇಳೆ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರು, ವಿಳಾಸ ತಪ್ಪಾಗಿದ್ದರೆ ತಕ್ಷಣವೇ ಸಮೀಪದ ಆಧಾರ್ ಕೇಂದ್ರಕ್ಕೆ ಹೋಗಿ ಸರಿಪಡಿಸಿಕೊಳ್ಳಿ.
ಒಂದು ವೇಳೆ ಆಫ್ ಲೈನ್ ಸಾಧ್ಯವಿಲ್ಲದಿದ್ದರೆ ಸುಲಭವಾಗಿ ಆನ್ ಲೈನ್ ಮುಖಾಂತರವೂ ತಿದ್ದುಪಡಿ ಮಾಡಿಕೊಳ್ಳಬಹುದು. ಇದಕ್ಕಾಗಿ https://ssup.uidai.gov.in/ssup/ ವೆಬ್ ಸೈಟ್ ಗೆ ಲಾಗಿನ್ ಆಗಬೇಕು. ಆಧಾರ್ ವಿಳಾಸ ನವೀಕರಿಸಿ ಆಯ್ಕೆ ಕ್ಲಿಕ್ ಮಾಡಿ. ನವೀಕರಿಸಲು ಸ್ಕ್ಯಾನ್ ಮಾಡಿದ ನಿಮ್ಮ ಮೂಲ ಪೋಷಕ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕಾಗುತ್ತದೆ. ಡೆಬಿಟ್/ಕ್ರೆಡಿಟ್ ಅಥವಾ ನೆಟ್ ಬ್ಯಾಂಕಿಂಗ್ ಮುಖಾಂತರ 50 ರೂ.ಗಳ ಶುಲ್ಕ ಪಾವತಿ ಮಾಡಬೇಕು. ನಿಮಗೆ ಒಂದು ಸೇವಾ ವಿನಂತಿಯ ಸಂಖ್ಯೆಯನ್ನು ನೀಡಲಾಗುತ್ತದೆ.ಇದನ್ನು ಬಳಸಿ ನಿಮ್ಮ ಅರ್ಜಿಯ ಸ್ಟೇಟಸ್ ವೀಕ್ಷಿಸಬಹುದಾಗಿದೆ. ನವೀಕರಿಸಿದ ಕಾಪಿ ಸಿಗಲು 30 ದಿನ ಬೇಕಾಗುತ್ತದೆ. ನವೀಕರಿಸಿದ ಬಳಿಕ ಹೊಸದಾಗಿ ಆಧಾರ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳಬೇಕು.