Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೆಂಗಳೂರು ಸಮೀಪವೇ ಟೈಗರ್, ಲಯನ್ ಸಫಾರಿ

ಬೆಂಗಳೂರು ಸಮೀಪವೇ ಟೈಗರ್, ಲಯನ್ ಸಫಾರಿ
ಬೆಂಗಳೂರು , ಸೋಮವಾರ, 21 ಆಗಸ್ಟ್ 2017 (14:34 IST)
ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಈಗ ಮೊದಲಿನಷ್ಟು ಸಸ್ಯರಾಶಿ ಉಳಿದಿಲ್ಲ. ಆದರೆ, ಬೆಂಗಳೂರು ಸಮೀಪವೇ ಒಂದು ಅದ್ಬುತ ಪರಿಸರವಿದೆ. ಅದುವೇ ಬನ್ನೇರುಘಟ್ಟ ನ್ಯಾಶನಲ್ ಪಾರ್ಕ್. ಒಂದು ದಿನದ ಟ್ರಪ್`ಗೆ ಹೇಳಿ ಮಾಡಿಸಿದ ಜಾಗ.

ಕುಟುಂಬ ಸಮೇತ ಕಾಲ ಕಳೆಯಬಹುದಾದ ಬೆಂಗಳೂರಿಗೆ ಹತ್ತಿರದ ಪ್ರವಾಸಿ ತಾಣ ಬನ್ನೇರುಘಟ್ಟ ನ್ಯಾಶನಲ್ ಪಾರ್ಕ್. ಟೈಗರ್ ಮತ್ತು ಲಯನ್ ಸಫಾರಿ ಸಹ ಇಲ್ಲಿದ್ದು, ನಿಗದಿತ ಹಣ ಕೊಟ್ಟು ಟಿಕೆಟ್ ಖರೀದಿಸಿದವರನ್ನ ಸುರಕ್ಷಿತ ಬಸ್ಸುಗಳಲ್ಲಿ ಕಾಡುಗಳ ಒಳಗೆ ಕರೆದೊಯ್ದು ಕಾಡು ಮೃಗಗಳ ದರ್ಶನ ಮಾಡಿಸಲಾಗುತ್ತೆ. ಬಸ್ಸಿನ ಸಮೀಪವೇ ಓಡಾಡುವ ಹುಲಿ, ಸಿಂಹ, ಆನೆ, ಕರಡಿಗಳನ್ನ ಕಂಡು ಅಬಾಲ ವೃದ್ಧರಾದಿಯಾಗಿ ಎಲ್ಲರೂ ರೋಮಾಂಚನಗೊಳ್ಳುತ್ತಾರೆ. ಅಪಾರ ಪ್ರಮಾಣದ ಜಿಂಕೆಗಳು, ಕಡವೆ ಪಕ್ಷಿಗಳನ್ನ ನೋಡಬಹುದಾಗಿದೆ.





ಬಯಾಲಜಿಕಲ್ ಪಾರ್ಕ್`ನಲ್ಲಿ ಬಟರ್ ಫ್ಲೈ ಪಾರ್ಕ್, ವಿಶಿಷ್ಟವಾದ ಪಕ್ಷಿಗಳು, ಹಾವು, ಆಮೆ, ಮೊಸಳೆ, ಹುಲಿ ಮುಂತಾದವುಗಳ ದರ್ಶನ ಸಿಗುತ್ತದೆ. ತಂಪಾದ ವಾತಾವರಣದಲ್ಲಿ ಮನಸ್ಸಿಗೆ ಉಲ್ಲಾಸ ಸಿಗುತ್ತದೆ. ಪಾರ್ಕ್ ಸಮೀಪದಲ್ಲೆ ರೆಸ್ಟೋರೆಂಟ್`ಗಳು ಇರುವುದರಿಂದ ಊಟಕ್ಕೆ ಯೋಚನೆ ಇಲ್ಲ.

ನೀವೂ ಬೆಂಗಳೂರಿನ ಸಮೀಪವೇ ಇರುವ ನ್ಯಾಶನಲ್ ಪಾರ್ಕ್`ಗೆ ಹೋಗಿ ಬನ್ನಿ. ಮೆಜೆಸ್ಟಿಕ್`ನಲ್ಲಿ ಕೇವಲ 34 ಕಿ.ಮೀ ದೂರದಲ್ಲಿರುವ ಇಲ್ಲಿಗೆ ನಾಯಂಡಹಳ್ಳಿ ಮೂಲಕ ನೈಸ್ ರಸ್ತೆಯಲ್ಲಿ ತೆರಬಹುದಾಗಿದೆ. ನಿರಂತರ ಬಸ್ಸುಗಳ ಸೌಲಭ್ಯವಿದೆ. ಮೆಜೆಸ್ಟಿಕ್`ನಿಂದ 365ಎನಿಂದ 365ವಿವರೆಗಿನ ಹಲವು ಬಸ್`ಗಳ ಸೌಲಭ್ಯವಿದೆ. ಬೆಳಗ್ಗೆ ಬೇಗ ಹೊರಟರೆ ಸಂಜೆ ಹೊತ್ತಿಗೆ ಒಂದೊಳ್ಳೆ ಟ್ರಿಪ್ ಮುಗಿಸಿಕೊಂಡು ಬರಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎಸಿಬಿಯಿಂದ ಮಾಜಿ ಸಿಎಂ ಯಡಿಯೂರಪ್ಪಗೆ ಮತ್ತೆ ಸಮನ್ಸ್