35 ವರ್ಷದ ವಿಜಯಲಕ್ಷ್ಮಿ ಎಂಬ ಮಹಿಳೆಗೆ ತನ್ನ ಗಂಡ ತನಗಾಗಿ ಹೊಲಿದು ತಂದ ಬ್ಲೌಸ್ ಡಿಸೈನ್ ಇಷ್ಟವಾಗಲಿಲ್ಲ. ಇದರಿಂದ ಕೋಪಗೊಂಡ ಆಕೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾಳೆ.ಗಂಡ-ಹೆಂಡತಿ ನಡುವೆ ಜಗಳಗಳು ಸಾಮಾನ್ಯ. ಆದರೆ, ಕೆಲವು ಬಾರಿ ಸಣ್ಣಪುಟ್ಟ ಜಗಳಗಳೇ ಪ್ರಾಣಕ್ಕೆ ಹಾನಿ ಉಂಟುಮಾಡಿದ ಘಟನೆಗಳೂ ನಡೆದಿವೆ. ಹೈದರಾಬಾದ್‌ನಲ್ಲಿ ಟೈಲರ್ ಆಗಿರುವ ತನ್ನ ಗಂಡನೊಂದಿಗೆ ಬ್ಲೌಸ್ ವಿಚಾರದಲ್ಲಿ ಜಗಳ ನಡೆದಿದ್ದು, ಬೇಸತ್ತ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 35 ವರ್ಷದ ವಿಜಯಲಕ್ಷ್ಮಿ ಎಂಬ ಮಹಿಳೆಗೆ ತನ್ನ ಗಂಡ ತನಗಾಗಿ ಹೊಲಿದು ತಂದ ಬ್ಲೌಸ್ ಡಿಸೈನ್ ಇಷ್ಟವಾಗಲಿಲ್ಲ. ಇದರಿಂದ ಕೋಪಗೊಂಡ ಆಕೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾಳೆ.
ಆ ಮಹಿಳೆ ತನ್ನ ಪತಿ ಶ್ರೀನಿವಾಸ್ ಜೊತೆ ಜಗಳವಾಡಿದ್ದಳು. ಇದರಿಂದ ಬೇಸತ್ತ ಶ್ರೀನಿವಾಸ್ ಮನೆಯಿಂದ ಹೊರಗೆ ಹೋಗಿದ್ದರು. ಗಂಡನ ಜೊತೆ ಜಗಳವಾಡಿದ ನಂತರ ವಿಜಯಲಕ್ಷ್ಮಿ ತನ್ನ ರೂಮಿಗೆ ಬೀಗ ಹಾಕಿ ಮಲಗಿದ್ದಳು. ನಂತರ, ಆಕೆಯ ಮಕ್ಕಳು ಶಾಲೆಯಿಂದ ಮನೆಗೆ ಹಿಂದಿರುಗಿದಾಗ, ಬೆಡ್ ರೂಮಿನ ಬಾಗಿಲಿಗೆ ಬೀಗ ಹಾಕಿರುವುದನ್ನು ಕಂಡು ಅದನ್ನು ತೆಗೆಯಲು ಪ್ರಯತ್ನಿಸಿದರು. ಆದರೆ, ಯಾವ ಪ್ರತಿಕ್ರಿಯೆಯೂ ಬಾರದ ಕಾರಣ ಆ ಮಕ್ಕಳು ಅಪ್ಪನಿಗೆ ಫೋನ್ ಮಾಡಿ ವಿಷಯ ತಿಳಿಸಿದರು. ಬಳಿಕ ಆ ಮಹಿಳೆಯ ಗಂಡ ಶ್ರೀನಿವಾಸ್ ಮನೆಗೆ ಹಿಂತಿರುಗಿ ರೂಮಿನ ಬಾಗಿಲು ಒಡೆದಾಗ ವಿಜಯಲಕ್ಷ್ಮೀ ನೆಲದ ಮೇಲೆ ಬಿದ್ದಿರುವುದು ಕಾಣಿಸಿತು.
ಹೈದರಾಬಾದ್ನ ಅಂಬರ್‌ಪೇಟ್ ಪ್ರದೇಶದ ಗೋಲ್ನಾಕ ತಿರುಮಲ ನಗರದಲ್ಲಿ ದಂಪತಿಗಳು ಒಟ್ಟಿಗೆ ವಾಸಿಸುತ್ತಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದರು. ಗಂಡ ತನಗೆ ಚೆನ್ನಾಗಿರುವ ಡಿಸೈನ್ನ ಬ್ಲೌಸ್ ಹೊಲಿದು ಕೊಟ್ಟಿಲ್ಲ ಎಂಬ ಕಾರಣಕ್ಕೆ ಜಗಳವಾಡಿದ ಹೆಂಡತಿ ತನ್ನ ರೂಮಿನಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.