Publish Date: Thu, 24 Mar 2022 (10:17 IST)
Updated Date: Thu, 24 Mar 2022 (10:18 IST)
ಚಿಕ್ಕಬಳ್ಳಾಪುರ: ಗಂಡನನ್ನು ಕೊಲೆ ಮಾಡಿದ ಪತ್ನಿ ಬಳಿಕ ತನಗೆ ಗೊತ್ತೇ ಇಲ್ಲದಂತೆ ನಾಟಕವಾಡಿ ಇದೀಗ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾಳೆ.
ಗಂಡ ಪ್ರತಿನಿತ್ಯ ಕುಡಿದು ಬಂದು ಕಿರಿ ಕಿರಿ ಮಾಡಿದ್ದ. ಇದರಿಂದ ಬೇಸತ್ತಿದ್ದ ಪತ್ನಿ ಆತನ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಳು.
ಕೊಲೆಗೆ ಬಳಸಿದ್ದ ಕಲ್ಲನ್ನು ಬಾವಿಗೆ ಎಸೆದಿದ್ದಳು. ಬಳಿಕ ತನ್ನನ್ನು ಗಂಡನನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ರಂಪಾಟ ಮಾಡಿದ್ದಳು. ಸ್ಥಳೀಯರ ದೂರಿನ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.