ನರೇಂದ್ರ ಮೋದಿ ಕೊಡುಗೆ ಏನ್ ಎಂದು ಜನತೆಗೆ ತಿಳಿಸಲಿ ಎಂದು ಹಾವೇರಿ ಜಿಲ್ಲೆ ಹಿರೇಕೆರೂರುಲ್ಲಿ ಸಿದ್ದರಾಮಯ್ಯ
ರಾಜ್ಯದ ಜಲ್ವಂತ ಸಮಸ್ಯೆಗಳನ್ನು ಬಗೆಹರಿಸಲು ರಾಜಕಾರಣವನ್ನು ಮೋದಿ ಮಾಡಿದ್ದಾರೆ.ನೀರಾವರಿ ಯೋಜನೆ ಸಮಸ್ಯೆಗೆ ಸರಿಯಾಗಿ ಸ್ಪಂದಿಸದೇ ದ್ರೋಹ ಮಾಡಿದ್ದಾರೆ. ರಾಜ್ಯದಲ್ಲಿ ರೈತರ ಪರಿಸ್ಥಿತಿ ಸಂಕಷ್ಡದಲ್ಲಿ ಇದ್ದಾರೆ. ರಾಷ್ಟ್ರೀಕರಣ ಬ್ಯಾಂಕ್ ಸಾಲ ಮಾಡಿ ಎಂದರೆ ಮೋದಿ ತುಟಿ ಪಿಟಕ್ ಎನ್ನಲಿಲ್ಲ ಎಂದು ದೂರಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಇಲ್ಲ. ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿಗೆ ಅಸ್ತಿತ್ವ ಇಲ್ಲ.ಈ ಕಾರಣಕ್ಕಾಗಿ ನಾನು ಹೇಳೋದು ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಅವರಪ್ಪನ ಆಣೆ ಮುಖ್ಯಮಂತ್ರಿ ಆಗಲ್ಲ ಎಂದು ತಿಳಿಸಿದರು.
ಹಿಂದಿನ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ನಮ್ಮ ಅವಧಿಯಲ್ಲಿ ನಡೆದಿಲ್ಲ.ಚೆಕ್ ಮೂಲಕ ಲಂಚ ಪಡೆದುಕೊಂಡಕ್ಕೆ ಸಿ.ಎಂ.ಸ್ಥಾನಕ್ಕೆ ರಾಜೀನಾಮೆ ನೀಡಿ ಜೈಲಿಗೆ ಹೋದ್ರು.ಯಡಿಯೂರಪ್ಪನ ಮೇಲೆ 23 ಕೇಸ್ ಗಳಿವೆ. ಅವರಿಂದ ರಾಜಕಾರಣ ಹಾಳಾಗಿ ಹೋಯಿತು.
ನನ್ನ ರಾಜಕೀಯ ಬದುಕಿನಲ್ಲಿ ಒಂದೆ ಒಂದು ಕ್ರಿಮಿನಲ್ ಮೊಕದ್ದಮೆ ದಾಖಲಾಗಿಲ್ಲ.ಆದ್ರೆ, ಇಂತವರಿಗೆ ಮತ್ತೆ ಅಧಿಕಾರ ಕೊಡಿ ಎನ್ನುತ್ತಿರುವ ಮೋದಿ, ಶಾ ಗೆ ಏನು ಹೇಳಬೇಕು ನೀವೆ ಹೇಳಿ ಎಂದರು. ಯಡಿಯೂರಪ್ಪ ಮುಖ್ಯಮಂತ್ರಿ ಆದ ಮೇಲೆ ಮಾಡಿರುವ ಸಾಧನೆ ಗೋಲಿಬಾರ್ ಮಾಡಿದ್ದು.
ಆಗ ರೈತರ ಸಾಲ ಮನ್ನಾ ಮಾಡಿ ಎಂದು ಒತ್ತಾಯ ಮಾಡಿದ್ದಾಗ, ಬಿ.ಎಸ್.ವೈ. ನಮ್ಮಲ್ಲಿ ನೋಟ್ ಪ್ರೀಂಟ್ ಮಾಡುವ ಮಿಷನ್ ಇಲ್ಲ ಎಂದ್ರು.ಇವರಿಗೆ ಅಧಿಕಾರ ಕೊಡಬೇಕನ್ರಿ, ಜನರು ಹಣ ಲೂಟಿ ಹೊಡೆಯಲು ರಾಜ್ಯದ ಜನ ಒಪ್ಪುದಿಲ್ಲ.
5 ವರ್ಷ ರಾಜ್ಯದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವಿ.ಆ ಕಾರಣಕ್ಕಾಗಿ ನಮಗೆ ಮತ ನೀಡಿ, ಕೆಲಸ ಮಾಡಿದವರಿಗೆ ಕೂಲಿ ಕೊಡಿ ಎಂದು ಸಿ.ಎಂ ಮನವಿ ಮಾಡಿದರು.