Publish Date: Tue, 12 Sep 2017 (20:27 IST)
Updated Date: Tue, 12 Sep 2017 (20:31 IST)
ಕೊಲೆಗಾರರನ್ನು ರಾಜ್ಯ ಸರಕಾರ ಯಾಕೆ ಬಂಧಿಸುತ್ತಿಲ್ಲ, ಇದೊಂದು ನಪುಂಸಕ ಸರಕಾರವೇ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಗುಡುಗಿದ್ದಾರೆ.
ಕೊಲೆಗಾರರನ್ನು ರಾಜ್ಯ ಸರಕಾರ ಯಾಕೆ ಬಂಧಿಸುತ್ತಿಲ್ಲ? ಕಲಬುರಗಿ ಹಂತಕರನ್ನು ಬಂಧಿಸಲು ತಡೆದಿದ್ದರಾದರೂ ಯಾರು? ಅನುಮಾನವಿದ್ದರೆ ಪ್ರಕರಣನ್ನು ಸಿಬಿಐಗೆ ಕೊಡಿ ಎಂದು ಕಿಡಿಕಾರಿದರು.
ಸಂಘಪರಿವಾರದವರನ್ನು ಬಂಧಿಸಲು ಮೆರವಣಿಗೆ ಮಾಡಿಸ್ತಾರೆ. ಸಂಘಪರಿವಾರ, ಬಿಜೆಪಿ ಹೆಸರಲ್ಲಿ ಘೋಷಣೆಗಳನ್ನು ಕೂಗಿಸ್ತಾರೆ, ವಿಚಾರವಾದಿಗಳ ಗೊಡ್ಡು ಬೆದರಿಕೆಗಳಿಗೆ ಸಂಘಪರಿವಾರ ಬೆದರುವುದಿಲ್ಲ ಎಂದು ತಿಳಿಸಿದ್ದಾರೆ.
ಸಂಘಪರಿವಾರಕ್ಕೆ ಕೊಲೆ ಸುಲಿಗೆಗಳಲ್ಲಿ ನಂಬಿಕೆಯಿಲ್ಲ. ಅದೊಂದು ದೇಶಭಕ್ತ ಸಂಘಟನೆಯಾಗಿದೆ ಎಂದು ತಿರುಗೇಟು ನೀಡಿದ್ದಾರೆ. ವಿಚಾರವಾದಿಗಳಿಗೆ ಆರೆಸ್ಸೆಸ್ ಬಿಜೆಪಿ ಮೇಲೆ ಆರೋಪ ಹೊರಿಸುವುದೇ ಕಾಯಕವಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.