ಮಂಡ್ಯ : ಐವರು ಧರ್ಮಗುರುಗಳಿಗೆ ಕೊರೊನಾ ದೃಢ ಪಟ್ಟ ಹಿನ್ನಲೆ ಧರ್ಮಗುರುಗಳು ಉಳಲಿದುಕೊಂಡಿದ್ದ ಸ್ಥಳದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಐವರು ಧರ್ಮಗುರುಗಳು ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಉಳಿದುಕೊಂಡಿದ್ದರು. ಆದಕಾರಣ 7 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. 3 ಕೀ.ಮೀ ಕಂಟೈನ್ ಮೆಂಟ್ ಜೀನ್ ಎಂದು ಘೋಷಣೆ ಮಾಡಲಾಗಿದೆ. ಧರ್ಮಗುರು ಸಂಪರ್ಕದಲ್ಲಿದ್ದ 7 ಜನರಿಗೆ ಐಸೋಲೇಷನ್ ವಾರ್ಡ್ ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.