Publish Date: Mon, 06 Apr 2020 (20:17 IST)
Updated Date: Mon, 06 Apr 2020 (20:19 IST)
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಈ ಕಾರಣಕ್ಕೆ ಉಪವಾಸ ಮಾಡಿದ್ದಾರೆ.
ಬಿಜೆಪಿಯ 40ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಅಂತವಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಒಂದೊತ್ತಿನ ಉಪವಾಸ ನಡೆಸಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಕೊರೊನಾ ವೈರಸ್ ನಿಂದ ತೊಂದರೆಗೆ ಒಳಗಾಗಿರುವ ಬಡವರು, ನಿರ್ಗತಿಕರಿಗೆ ಆಹಾರ ಒದಗಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದ್ದರು. ಹೀಗಾಗಿ ತಾವೂ ಒಂದು ಹೊತ್ತಿನ ಉಪವಾಸ ಕೈಗೊಂಡಿದ್ದಾಗಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಪಕ್ಷದ ಕಾರ್ಯಕರ್ತರು, ಮುಖಂಡರೂ ಸಹ ಒಂದು ಹೊತ್ತಿನ ಉಪವಾಸ ಆಚರಣೆ ಮಾಡಿದ್ದಾರೆ.