Publish Date: Tue, 19 Feb 2019 (16:30 IST)
Updated Date: Tue, 19 Feb 2019 (16:31 IST)
ಶಾಸಕ ಸಿಟಿ ರವಿ ಕಾರು ಡಿಕ್ಕಿಯಾಗಿ ಇಬ್ಬರು ಯುವಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರ ವಿರುದ್ಧ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ಮದ್ಯಪಾನ ಮಾಡಿ ಕಾರು ಚಲಾಯಿಸುತ್ತಿದ್ದರು ಶಾಸಕ ಸಿ ಟಿ ರವಿ. ಹೀಗಂತ ಗಾಯಾಳು ಪುನಿತ್ ಗಂಭೀರ ಆರೋಪ ಮಾಡಿದ್ದಾರೆ.
ಪ್ರಶ್ನೆ ಮಾಡಿದ್ದಕ್ಕೆ ಸಿ ಟಿ ರವಿ ಬೆಂಬಲಿಗರಿಂದ ಗಾಯಾಳುಗಳ ಮೇಲೆ ದೌರ್ಜನ್ಯ ನಡೆದಿದೆ ಎನ್ನಲಾಗಿದೆ. ಕುಡಿದು ಚಾಲನೆ ಮಾಡಿದ್ದು ತಪ್ಪಲ್ವಾ? ಅಂದಿದ್ದಕ್ಕೆ ಕಾರ್ ಹತ್ತು ಹೇಳ್ತಿವಿ ಅಂತಾ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಬೆಂಬಲಿಗರನ್ನ ಕರೆಸಿಕೊಂಡ ಸಿ ಟಿ ರವಿ, ಗಾಯಾಳುಗಳನ್ನ ಸೌಜನ್ಯಕ್ಕೂ ಮಾತನಾಡಿಸದೆ ಸ್ಥಳದಿಂದ ಕಾಲ್ಕಿತ್ತರು ಎಂದು ಗಾಯಾಳು ಆರೋಪ ಮಾಡಿದ್ದಾರೆ. ಸಿ ಟಿ ರವಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಗಾಯಾಳು ಪುನಿತ್ ಆಗ್ರಹ ಮಾಡಿದ್ದಾರೆ. ಕಳೆದ ರಾತ್ರಿ ನಡೆದಿದ್ದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೆ ಮೃತಪಟ್ಟಿದ್ದರು. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.