Publish Date: Tue, 13 Feb 2018 (07:10 IST)
Updated Date: Tue, 13 Feb 2018 (07:14 IST)
ಕಲಬುರಗಿ : ನಾವು ಏನು ಮಾಡಿದ್ದೇವೆ ಅಂತಾ ನಿಮಗೆ ಗೊತ್ತಿಲ್ಲದೆ ಇದ್ದಲ್ಲಿ ನೀವ್ಯಾಕೇ ಪ್ರಧಾನಿಯಾಗಿರಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಪ್ರಧಾನಿ ಮೋದಿ ಅವರ ವಿರುದ್ದ ಕಿಡಿಕಾರಿದ್ದಾರೆ.
‘ಮೋದಿ ವಿದೇಶದಲ್ಲಿ ಜೋರಾಗಿ ಭಾಷಣ ಮಾಡ್ತಾರೆ. ಸದನದಲ್ಲಿ ಮೌನವಾಗಿ ಕುಳಿಕೊಳ್ಳುತ್ತಾರೆ. ಮೋದಿ ವಿದೇಶಕ್ಕೆ ಹೋದಾಗ ಕೂಡ ಕಾಂಗ್ರೆಸ್ ಏನ್ ಮಾಡಿದೆ ಅಂತಾ ಕೇಳ್ತಾರೆ. ಅಮೇರಿಕಾದಲ್ಲಿರುವ ಭಾರತೀಯ ಇಂಜಿನಿಯರ್ಸ್, ಡಾಕ್ಟರ್'ಗಳೆಲ್ಲರು ನಮ್ಮ ಕಾಲದಲ್ಲಿ ಓದಿ ಬೆಳೆದವರು. ಇಎಸ್‌ಐ ಮೆಡಿಕಲ್ ಹಬ್, ಸೇಂಟ್ರಲ್ ಯುನಿವರ್ಸಿಟಿ, ನಾಲ್ಕು ಮೆಡಿಕಲ್ ಕಾಲೇಜು, 371(ಜೆ) ಕಲಬುರಗಿ ಜಿಲ್ಲೆಗೆ ನೀಡಿದ್ದೇವೆ. ಇವೆಲ್ಲ ನೀಡಿದ್ದು ನಮ್ಮ ಕಾಂಗ್ರೆಸ್ ಸರ್ಕಾರ ಇವೆಲ್ಲವನ್ನು ನೋಡೊಕೆ ಪ್ರಧಾನಿ ಮೋದಿ ಒಮ್ಮೆ ಬರಲಿ’ ಎಂದು ಖರ್ಗೆ ಅವರು ಪ್ರಧಾನಿ ಅವರಿಗೆ ಸವಾಲೆಸಿದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ