Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ್ ಪೂಜಾರಿ ಅವರಿಗೆ ವ್ಯಕ್ತಿಯೊಬ್ಬರು ಅವಾಚ್ಯ ಶಬ್ದಗಳಿಂದ ಬೈದಿರುವುದನ್ನು ಅವರ ಆಪ್ತರೊಬ್ಬರು ವೇದಿಕೆ ಮೇಲೆ ಪ್ರಸ್ತಾಪಿಸಿದಾಗ ಕಣ್ಣೀರು ಹಾಕಿದ್ದಾರೆ.
ಜನಾರ್ದನ್ ಪೂಜಾರಿ ಅವರು ಬಂಟ್ವಾಳದಲ್ಲಿ ನಡೆದ ಬಿಲ್ಲವ ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಅವರ ಆಪ್ತರೊಬ್ಬರು ಇವರನ್ನುದ್ದೇಶಿಸಿ ಮಾತನಾಡುವಾಗ ವ್ಯಕ್ತಿಯೊಬ್ಬರು ಅವಾಚ್ಯ ಶಬ್ದಗಳಿಂದ ಅವರನ್ನು ಬೈದ ವಿಷಯ ಪ್ರಸ್ತಾಪಿಸಿದರು. ಅದನ್ನು ಕೇಳಿಸಿಕೋಡ ಜನಾರ್ದನ್ ಪೂಜಾರಿ ಅವರು ಮನನೊಂದು ದುಃಖ ತಾಳಲಾರದೆ ವೇದಿಕೆಯ ಮೇಲೆ ಎಲ್ಲರ ಸಮ್ಮುಖದಲ್ಲೆ ಕಣ್ಣೀರು ಹಾಕಿದರು. ಇವರು ಕಣ್ಣೀರು ಸುರಿಸಿದ ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ