Publish Date: Fri, 05 Oct 2018 (11:07 IST)
Updated Date: Fri, 05 Oct 2018 (11:10 IST)
ನವದೆಹಲಿ: ರಾಜ್ಯದ ಹಲವು ಸಮಸ್ಯೆಗಳಿಗೆ ಕೇಂದ್ರದ ನೆರವು ಕೇಳಲು ದೆಹಲಿಗೆ ತೆರಳಿದ್ದ ಮಾಜಿ ಪ್ರಧಾನಿ ದೇವೇಗೌಡಗೆ ಪ್ರಧಾನಿ ಮೋದಿ ಭೇಟಿಯಾಗಲು ಸಾಧ‍್ಯವಾಗಿಲ್ಲ.
ಮೇಕೆದಾಟು ಯೋಜನೆಗೆ ಕೇಂದ್ರದ ಸಹಕಾರ, ಕೊಡಗು ಪ್ರವಾಹಕ್ಕೆ ನೆರವು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ದೆಹಲಿಗೆ ತೆರಳಿದ್ದ ದೇವೇಗೌಡರಿಗೆ ಪ್ರಧಾನಿ ಭೇಟಿಯಾಗಲು ಸಾಧ್ಯವಾಗಿಲ್ಲ.
ಗೃಹ ಸಚಿವ ರಾಜನಾಥ್ ಸಿಂಗ್ ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ದೇವೇಗೌಡರು ‘ರಷ್ಯಾ ಅಧ್ಯಕ್ಷರ ಭೇಟಿ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಭೇಟಿಯಾಗಲು ಸಾಧ‍್ಯವಾಗಿಲ್ಲ. ಹೀಗಾಗಿ ಅವರೇ ಗೃಹಸಚಿವರನ್ನು ಭೇಟಿಯಾಗಿ ಸಮಸ್ಯೆ ಹೇಳಲು ಸೂಚಿಸಿದ್ದರು’ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.