Publish Date: Fri, 09 Dec 2022 (19:44 IST)
Updated Date: Fri, 09 Dec 2022 (19:47 IST)
ದಲಿತರು ಸಿಎಂ ಯಾಕಾಗಬಾರದು ಅವರಿಗೆ ಹಿರಿತನ ಇಲ್ಲವಾ ನಾಯಕರು ಇಲ್ಲವಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ. ನಮ್ಮ ಪಕ್ಷದಲ್ಲಿ ಯಾರಾದರೂ ಸಿಎಂ ಆಗಬಹುದು. ಅದೇ ನಮ್ಮ ದೊಡ್ಡ ಶಕ್ತಿ. ವೀರಪ್ಪ ಮೊಯ್ಲಿ ಅವರ ಸಮುದಾಯ ಎಷ್ಟಿತ್ತು? ಗುಂಡೂರಾವ್ ಆಗಿರಲಿಲ್ಲವಾ? ಖರ್ಗೆ ಅವರಿಗೆ ದಲಿತರು ಅಂತಾ ಎಐಸಿಸಿ ಅಧ್ಯಕ್ಷ ಸ್ಥಾನ ಕೊಟ್ಟಿಲ್ವ. ಅವರು ಸೀನಿಯರ್ ಮೋಸ್ಟ್ ನಾಯಕರು. ಹೀಗಾಗಿ ಅವರಿಗೆ ಕೊಟ್ಟಿದ್ದಾರೆ. ಕಾಂಗ್ರೆಸ್ ಪಾರ್ಟಿಯಲ್ಲಿ ಇದು ಸಾಧ್ಯ ಆಗುತ್ತೆ . ಅದೇ ನಮ್ಮ ಪಾರ್ಟಿ ಶಕ್ತಿ.. ದೆ ಆರ್ ಕೇಪಬಲ್, ನೋ ಡೌಟ್ ಎಂದು ಹೇಳಿದರು. ಚಿತ್ರದುರ್ಗದಲ್ಲಿ ದಲಿತರ ಸಮಾವೇಶ ನಡೆಯುತ್ತಿದ್ದು, ದಲಿತ ಸಿಎಂ ಬಗ್ಗೆ ಚರ್ಚೆಯಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಯಾಕೆ ಆಗಬಾರದು? ದಲಿತರು ಯಾಕೆ ಮುಖ್ಯಮಂತ್ರಿ ಆಗಬಾರದು? ನಾನು ಬೇರೆಯವರಂತೆ ಮುಸಲ್ಮಾನರನ್ನು ಮುಖ್ಯಮಂತ್ರಿ ಮಾಡುತ್ತೇನೆ, ದಲಿತರನ್ನು ಮಾಡುತ್ತೇನೆ ಎಂದು ಹೇಳುವುದಿಲ್ಲ ಎಂದರು.