Publish Date: Wed, 11 Mar 2020 (13:10 IST)
Updated Date: Wed, 11 Mar 2020 (13:12 IST)
ಬೆಂಗಳೂರು : ವಿಧಾನಸಭೆ ಕಲಾಪಕ್ಕೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗೈರಾದ ಹಿನ್ನಲೆಯಲ್ಲಿ ರೇಶ್ ಕುಮಾರ್ ವಿರುದ್ಧ ಬಿಜೆಪಿ ನಾಯಕರು ಟೀಕೆ ಮಾಡಿದ್ದಾರೆ.
ನಿನ್ನೆ ಸದನದಲ್ಲಿ ಬಿಜೆಪಿ ನಾಯಕ ಸುಧಾಕರ್ ಮತ್ತು ರಮೇಶ್ ಕುಮಾರ್ ನಡುವೆ ವಾಕ್ಸಮರ ಏರ್ಪಟ್ಟಿತ್ತು. ಆದರೆ ಇಂದಿನ ಸದನದಲ್ಲಿ ರಮೇಶ್ ಕುಮಾರ್ ಗೈರಾಗಿದ್ದಾರೆ. ಇದಕ್ಕೆ ವ್ಯಂಗ್ಯ ಮಾಡಿದ ಬಿಜೆಪಿ ನಾಯಕರು, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪಲಾಯನವಾದಿ. ಹೀಗಾಗಿ ಇವತ್ತು ಅವರು ಕಲಾಪಕ್ಕೆ ಬಂದಿಲ್ಲವೆಂದು ಟೀಕೆ ಮಾಡಿ ಪಲಾಯನವಾದಿ ರಮೇಶ್ ಕುಮಾರ್ ಎಂದು ಘೋಷಣೆ ಮಾಡಿದ್ದಾರೆ.