ಬೆಂಗಳೂರು : ಮೈತ್ರಿ ಸರ್ಕಾರದ ಅತೃಪ್ತ ಶಾಸಕರ ರಾಜೀನಾಮೆ ಸ್ವೀಕರಿಸುವ ವಿಚಾರದಲ್ಲಿ ಬಿಜೆಪಿಯವರು ಒತ್ತಡ ಹೇರುತ್ತಿರುವ ಹಿನ್ನಲೆಯಲ್ಲಿ ಇದೀಗ ಬಿಜೆಪಿ ನಾಯಕರಿಗೆ ಸ್ಪೀಕರ್ ರಮೇಶ್ ಕುಮಾರ್ ಟಾಂಗ್ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಸ್ವೀಕರಿಸೋ ಬಗ್ಗೆ ಬಿಜೆಪಿಯವರಿಗೆ ಯಾಕೆ ಇಷ್ಟೊಂದು ಅರ್ಜೆಂಟ್ ..? ಶಾಸಕರ ರಾಜೀನಾಮೆ ವಿಚಾರದಲ್ಲಿ ತಿಂಗಳುಗಟ್ಟಲೆ ಕಳೆದಿರೋದು ಇದೆ. ತಿಂಗಳುಗಳ ಕಾಲ ರಾಜೀನಾಮೆ ಅಂಗೀಕಾರವಾಗದಿರೋ ಉದಾಹರಣೆ ಇದೆ. ಆದರೆ ಒಂದೇ ವಾರದಲ್ಲಿ ಇವರಿಗೆ ಯಾಕೆ ಇಷ್ಟೊಂದು ಅರ್ಜೆಂಟ್..? ಎಂದು ಪ್ರಶ್ನಿಸಿದ್ದಾರೆ.
ಒಂದು ವಾರ ವಿಳಂಬದಿಂದ ತುರ್ತಾಗಿ ಆಗಬೇಕಿರೋ ಕೆಲಸವಾದ್ರೂ ಏನು? ಜನಸಾಮಾನ್ಯರು ಅವರ ಪಾಡಿಗೆ ಇದ್ದಾರಲ್ಲವೇ? ನಾನು ಕುಟುಂಬದೊಂದಿಗೆ ಇದ್ದೇನೆ. ಖಾಸಗಿ ಮನೆಯಲ್ಲಿ ಯಾವುದೇ ವ್ಯವಹಾರ ಮಾಡಿಲ್ಲ. ಸಂಪ್ರದಾಯದ ಪ್ರಕಾರ ನನ್ನನ್ನು ವಿಧಾನಸೌಧದಲ್ಲಿ ಭೇಟಿ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.